CONNECT WITH US  

30 ಸೆಕೆಂಡ್‌ನ‌ಲ್ಲೇ ಚಂದನ್‌ ಶೆಟ್ಟಿ ಹಾಡು ವೈರಲ್‌!

ಒಂದು ಸಿನಿಮಾ ಮೊದಲು ಕುತೂಹಲ ಕೆರಳಿಸೋದೇ ಶೀರ್ಷಿಕೆಯಿಂದ. ಈಗಾಗಲೇ ಅಂತಹ ವಿಭಿನ್ನ ಶೀರ್ಷಿಕೆವುಳ್ಳ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ "3 ಗಂಟೆ 30 ದಿನ 30 ಸೆಕೆಂಡ್‌' ಚಿತ್ರವೂ ಸೇರಿದೆ. ಈಗಾಗಲೇ ಚಿತ್ರದ ಹಾಡುಗಳು ಎಲ್ಲೆಡೆ ಮೆಚ್ಚುಗೆ ಪಡೆದಿವೆ. ರಾಕ್‌ ಗಾಯಕ ಚಂದನ್‌ಶೆಟ್ಟಿ ಹಾಡಿರುವ ಹಾಡು ಕೂಡ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದೆ ಎಂಬುದು ವಿಶೇಷ.

ಚಂದ್ರಶೇಖರ್‌ ಆರ್‌. ಪದ್ಮಶಾಲಿ ನಿರ್ಮಾಣದ ಈ ಚಿತ್ರವನ್ನು ಮಧುಸೂಧನ್‌ ನಿರ್ದೇಶಿಸಿದ್ದಾರೆ. ಆರಂಭದಿಂದಲೂ ಒಂದಷ್ಟು ಗಮನಸೆಳೆದಿರುವ ಈ ಚಿತ್ರ ಈಗ ಬಿಡುಗಡೆಗೆ ತಯಾರಾಗಿದೆ. ಕನ್ನಡ ಮಟ್ಟಿಗೆ ಬೇರೆ ರೀತಿಯ ಪ್ರಯತ್ನ ಮತ್ತು ಪ್ರಯೋಗ ಮಾಡಿರುವ ನಿರ್ದೇಶಕರು, ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಹಾಡನ್ನೂ ಬರೆದಿದ್ದಾರೆ. ಅವರ ಗೆಳೆಯರು ಬ್ರೈನ್‌ ಶೇರ್‌ ಕ್ರಿಯೇಷನ್‌ ಪ್ರ„ವೇಟ್‌ ಲಿಮಿಟೆಡ್‌ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕತ್ತರಿ ಹಾಕದೆ, ಯು/ಎ ಅರ್ಹತಾ ಪತ್ರ ನೀಡಿದೆ. ಇದು ಈಗಿನ ಕಾಲಮಾನದ ಕಥೆ. ಇಲ್ಲಿ ಯುವಕರಿಗೆ ಸಾಕಷ್ಟು ಸಂದೇಶವಿದೆ. ಅಷ್ಟೇ ಅಲ್ಲ, ಒಂದು ಮನರಂಜನಾತ್ಮಕ ಚಿತ್ರವೂ ಹೌದು. ಕಲಾತ್ಮಕ ಅಂಶಗಳನ್ನು ಇಟ್ಟುಕೊಂಡೇ ನಿರ್ದೇಶಕ ಮಧುಸೂಧನ್‌ ಮಾಸ್‌ ಅಂಶಗಳನ್ನು ಸೇರಿಸಿದ್ದಾರೆ.

ಪ್ರತಿ ಹಂತದಲ್ಲೂ ಕುತೂಹಲ ಮೂಡಿಸುವ ಈ ಚಿತ್ರದಲ್ಲಿ ಪ್ರೀತಿ, ಸೆಂಟಿಮೆಂಟ್‌ ಹಾಗು ಭಾವನಾತ್ಮಕ ಅಂಶಗಳಿವೆ. ಚಿತ್ರಕ್ಕೆ ಅರು ಗೌಡ ನಾಯಕ. ಅವರಿಗೆ ಕಾವ್ಯಾಶೆಟ್ಟಿ ನಾಯಕಿ. ಉಳಿದಂತೆ ದೇವರಾಜ್‌, ಸುಧಾರಾಣಿ ಇತರರು ಇದ್ದಾರೆ. ಶ್ರೀಧರ್‌ ವಿ.ಸಂಭ್ರಮ್‌ ಸಂಗೀತವಿದೆ. ಮಧುಸೂದನ್‌, ಜಯಂತ್‌ ಕಾಯ್ಕಿಣಿ ಗೀತೆ ರಚಿಸಿದ್ದಾರೆ.

Back to Top