CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಾನ್‌ ಒಂಥರಾ, ನಾ ನಿನ್‌ ತರ ಅಲ್ಲ

"ರಾಜು ಕನ್ನಡ ಮೀಡಿಯಂ' ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಅಂಬರೀಶ್‌, ಅದಾಗಿ ಒಂದು ತಿಂಗಳಲ್ಲಿ ಇನ್ನೊಂದು ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. ಇಮ್ರಾನ್‌ ಸರ್ದಾರಿಯಾ ನಿರ್ದೇಶನದ "ಉಪ್ಪು ಹುಳಿ ಖಾರ" ಚಿತ್ರ ನವೆಂಬರ್‌ 24ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಪಾತ್ರಗಳ ಟೀಸರ್‌ ಬಿಡುಗಡೆ ಸಮಾರಂಭ ಬುಧವಾರ ನಡೆಯಿತು.

ಅಂಬರೀಶ್‌ ಅವರು ಬಂದು, ಟೀಸರ್‌ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಜನಪ್ರಿಯ ಹಾಡಾದ "ರೋಮಿಯೋ ಪ್ರೇಮಿಯೋ ...' ಹಾಡಿಗೆ ಅವರು ಹೆಜ್ಜೆ ಹಾಕಬೇಕೆಂದು ಚಿತ್ರತಂಡದವರು ಆಸೆಪಟ್ಟಾಗ, ಅಂಬರೀಶ್‌ ಅವರು ಮಾಲಾಶ್ರೀ ಮತ್ತು ಅನುಶ್ರೀ ಅವರ ಜೊತೆಗೆ ಹೆಜ್ಜೆ ಹಾಕಿದರು.

ಅಂಬರೀಶ್‌ ಮತ್ತು ಮಾಲಾಶ್ರೀ ಅವರು ಜೊತೆಗೆ ಹೆಜ್ಜೆ ಹಾಕಿದ್ದು ಹೊಸದೇನಲ್ಲ. ಈ ಹಿಂದೆ ಹಲವು ಚಿತ್ರಗಳಿಗೆ ಇಬ್ಬರೂ ಒಟ್ಟಿಗೇ ನೃತ್ಯ ಮಾಡಿದ್ದಾರೆ. ಈಗ ಬಹಳ ವರ್ಷಗಳ ನಂತರ ಅವರಿಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಇಂದು ಹೆಚ್ಚು ಓದಿದ್ದು

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು. 

Nov 25, 2017 09:08am

ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸುತ್ತಿರುವ ಗಣ್ಯರು.

Nov 25, 2017 08:52am
Back to Top