ನಾನ್ ಒಂಥರಾ, ನಾ ನಿನ್ ತರ ಅಲ್ಲ
Team Udayavani, Nov 15, 2017, 10:27 AM IST
“ರಾಜು ಕನ್ನಡ ಮೀಡಿಯಂ’ ಚಿತ್ರದ ಟೀಸರ್ ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಅಂಬರೀಶ್, ಅದಾಗಿ ಒಂದು ತಿಂಗಳಲ್ಲಿ ಇನ್ನೊಂದು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. ಇಮ್ರಾನ್ ಸರ್ದಾರಿಯಾ ನಿರ್ದೇಶನದ “ಉಪ್ಪು ಹುಳಿ ಖಾರ” ಚಿತ್ರ ನವೆಂಬರ್ 24ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಪಾತ್ರಗಳ ಟೀಸರ್ ಬಿಡುಗಡೆ ಸಮಾರಂಭ ಬುಧವಾರ ನಡೆಯಿತು.
ಅಂಬರೀಶ್ ಅವರು ಬಂದು, ಟೀಸರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಜನಪ್ರಿಯ ಹಾಡಾದ “ರೋಮಿಯೋ ಪ್ರೇಮಿಯೋ …’ ಹಾಡಿಗೆ ಅವರು ಹೆಜ್ಜೆ ಹಾಕಬೇಕೆಂದು ಚಿತ್ರತಂಡದವರು ಆಸೆಪಟ್ಟಾಗ, ಅಂಬರೀಶ್ ಅವರು ಮಾಲಾಶ್ರೀ ಮತ್ತು ಅನುಶ್ರೀ ಅವರ ಜೊತೆಗೆ ಹೆಜ್ಜೆ ಹಾಕಿದರು.
ಅಂಬರೀಶ್ ಮತ್ತು ಮಾಲಾಶ್ರೀ ಅವರು ಜೊತೆಗೆ ಹೆಜ್ಜೆ ಹಾಕಿದ್ದು ಹೊಸದೇನಲ್ಲ. ಈ ಹಿಂದೆ ಹಲವು ಚಿತ್ರಗಳಿಗೆ ಇಬ್ಬರೂ ಒಟ್ಟಿಗೇ ನೃತ್ಯ ಮಾಡಿದ್ದಾರೆ. ಈಗ ಬಹಳ ವರ್ಷಗಳ ನಂತರ ಅವರಿಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ