CONNECT WITH US  

ಯಶ್‌ ಹುಟ್ಟುಹಬ್ಬಕ್ಕೆ ಕೆಜಿಎಫ್ ಟೀಸರ್‌

ಕನ್ನಡದಲ್ಲಿ ಈಗಲೇ ನಿರೀಕ್ಷೆ ಹುಟ್ಟಿಸಿರುವ ಯಶ್‌ ಅಭಿನಯದ "ಕೆಜಿಎಫ್' ಚಿತ್ರವು ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಡಿಸೆಂಬರ್‌ ಕೊನೆಯ ವಾರದಲ್ಲಿ ಬಿಡುಗಡೆಯಾಗಬೇಕಿತ್ತು. ಚಿತ್ರದ ಚಿತ್ರೀಕರಣವೇ ಇನ್ನೂ ಮುಕ್ತಾಯವಾಗದ ಕಾರಣ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ, ಚಿತ್ರದ ಬಿಡುಗಡೆ ಏನಿದ್ದರೂ ಮುಂದಿನ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲೇ.

ಅಲ್ಲಿಗೆ ಈ ವರ್ಷ ಯಶ್‌ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗುತ್ತಿಲ್ಲ. ಈ ಮಧ್ಯೆ ಬಂದಿರುವ ಸುದ್ದಿಯ ಪ್ರಕಾರ, "ಕೆಜಿಎಫ್' ಚಿತ್ರದ ಟೀಸರ್‌ ಯಶ್‌ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿರುವುದು. ಯಶ್‌ ಜನವರಿ ಎಂಟರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಂದು "ಕೆಜಿಎಫ್' ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಲಿದೆ.

ಇಲ್ಲಿಯವರೆಗೂ ಚಿತ್ರದ ಎರಡು ಪೋಸ್ಟರ್‌ಗಳು ಮಾತ್ರ ಬಿಡುಗಡೆಯಾಗಿದ್ದು, ಚಿತ್ರದ ಕುರಿತು ಯಾವುದೇ ರೀತಿಯ ಮಾಹಿತಿಗಳು ಸಿಕ್ಕಿಲ್ಲ. ಹಾಗಾಗಿ ಚಿತ್ರದಲ್ಲಿ ಏನಿರಬಹುದು ಎಂಬ ಕುತೂಹಲವು ಯಶ್‌ ಅಭಿಮಾನಿಗಳಿಗೆ ಸೇರಿದಂತೆ ಎಲ್ಲರಿಗೂ ಇದೆ. ಅದು ಯಶ್‌ ಅವರ ಹುಟ್ಟುಹಬ್ಬಕ್ಕೆ ತಣಿಯುವ ಸಾಧ್ಯತೆ ಇದೆ. ಅಂದಹಾಗೆ, ನಿರ್ದೇಶಕ ಪ್ರಶಾಂತ್‌ ನೀಲ್‌ ಈ ಚಿತ್ರವನ್ನು ನಾಲ್ಕು ಭಾಷೆಯಲ್ಲಿ ಮಾಡುತ್ತಿದ್ದಾರೆ.

ಅಂತೆಯೇ ಪೋಸ್ಟರ್‌ನಲ್ಲೂ ಕೂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಶೀರ್ಷಿಕೆ ಹಾಕಿ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಇದು ಎರಡನೇ ಪೋಸ್ಟರ್‌ ರಿಲೀಸ್‌ ಆಗಿದ್ದು, ಸಿನಿಮಾದ ಚಿತ್ರೀಕರಣ ಜೋರಾಗಿಯೇ ಸಾಗುತ್ತಿದೆ. ಇನ್ನು, "ಕೆಜಿಎಫ್' ಮೂಲಕ ಶ್ರೀನಿಧಿ ಶೆಟ್ಟಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.  

ಮೂಲತಃ ಮಂಗಳೂರಿನ ಬೆಡಗಿಯಾಗಿರುವ ಶ್ರೀನಿಧಿ ಶೆಟ್ಟಿ, 2015 ರಲ್ಲಿ ಮಣಪ್ಪುರಂ ಮಿಸ್‌ ಸೌತ್‌ ಇಂಡಿಯಾ ಬ್ಯೂಟಿ ಕಾಂಟೆಸ್ಟ್‌ ಆಗಿ ಭಾಗವಹಿಸಿ ಮಿಸ್‌ ಕರ್ನಾಟಕ ಮತ್ತು ಮಿಸ್‌ಬ್ಯೂಟಿಫ‌ುಲ್ ಸ್ಮೈಲ್ ಪ್ರಶಸ್ತಿ ಗೆದ್ದಿದ್ದರು. ಇನ್ನು, ವಿಜಯ್‌ ಕಿರಗಂದೂರು ಚಿತ್ರದ ನಿರ್ಮಾಪಕರು. ಈಗಾಗಲೇ ವಿಜಯ್‌ಕಿರಗಂದೂರು ಕೂಡ ಯಶಸ್ವಿ ನಿರ್ಮಾಪಕರೆನಿಸಿಕೊಂಡಿದ್ದಾರೆ.

ರವಿ ಬಸ್ರೂರ್‌ ಸಂಗೀತವಿದೆ. ಸ್ಥಿರಚಿತ್ರ ಛಾಯಾಗ್ರಾಹಕ ಭುವನ್‌ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಉಳಿದಂತೆ, ರವಿ ಸಂತೇಹಕ್ಲು ಮತ್ತು ಸುರೇಶ್‌ ದೊಡ್ಡಮನಿ ಕಲಾ ನಿರ್ದೇಶನವಿದೆ. ರವಿವರ್ಮ ಸಾಹಸ ಸಂಯೋಜನೆ, ರಾಮರಾವ್‌ ಮತ್ತು ಕಾರ್ತಿಕ್‌ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top