ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಭರ್ಜರಿ ಹವಾ ಸೃಷ್ಟಿಸಿದ “ಅಂಜನಿಪುತ್ರ’
Team Udayavani, Nov 25, 2017, 2:46 PM IST
ಪುನೀತ್ ರಾಜಕುಮಾರ್ ನಟನೆಯ “ಅಂಜನಿಪುತ್ರ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಟ್ರೈಲರ್ ಅನ್ನು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಆಕ್ಷನ್ ಪ್ರಿಯರಲ್ಲಿ ಟ್ರೈಲರ್ ಕುತೂಹಲ ಹುಟ್ಟುಹಾಕಿದೆ.
ಇನ್ನು ಚಿತ್ರದ ಆಡಿಯೋ ಮತ್ತು ಟೀಸರ್ ಬಿಡುಗಡೆ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಭಗವಾನ್, ಹಿರಿಯ ಸಂಗೀತ ನಿರ್ದೇಶಕ ರಾಜನ್, ನಟರಾದ ಶಿವರಾಜಕುಮಾರ್ ಹಾಗೂ ಚಿತ್ರತಂಡ ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿತು.
ಅಂದಿನ ಕಾರ್ಯಕ್ರಮದ ವಿಶೇಷವೆಂದರೆ ಪಿಆರ್ಕೆ ಆಡಿಯೋ. ಪುನೀತ್ರಾಜಕುಮಾರ್ ಪಿಆರ್ಕೆ ಆಡಿಯೋ ಎಂಬ ಸಂಸ್ಥೆ ಮೂಲಕ “ಅಂಜನಿಪುತ್ರ’ದ ಹಾಡುಗಳನ್ನು ಹೊರತಂದಿದ್ದಾರೆ. ಈ ಮೂಲಕ ನಿರ್ಮಾಣದ ಜೊತೆಗೆ ಸಂಗೀತ ಕ್ಷೇತ್ರಕ್ಕೂ ಪುನೀತ್ ಕಾಲಿಟ್ಟಿದ್ದಾರೆ ಪುನೀತ್.
ಈ ಚಿತ್ರವನ್ನು ಎಂ.ಎನ್.ಕುಮಾರ್ ನಿರ್ಮಿಸಿದ್ದು, ಹರ್ಷ ನಿರ್ದೇಶಿಸಿದ್ದಾರೆ. ತಮಿಳಿನ ಪೂಜೈ ಚಿತ್ರದ ರಿಮೇಕ್ ಆಗಿರುವ ಚಿತ್ರದಲ್ಲಿ ಪುನೀತ್ಗೆ ತಾಯಿಯಾಗಿ ರಮ್ಯಾ ಕೃಷ್ಣ, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ರವಿಶಂಕರ್ ಸೇರಿ ಹಲವು ಕಲಾವಿದರ ಅಭಿನಯವಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು