CONNECT WITH US  

ಇಂದು ಚಮಕ್ ಫಸ್ಟ್ ಟೀಸರ್ ರಿಲೀಸ್

ಸುನಿ ನಿರ್ದೇಶನದ, ಗಣೇಶ್‌ ನಾಯಕರಾಗಿ ನಟಿಸುತ್ತಿರುವ "ಚಮಕ್‌' ಚಿತ್ರ ಚಿತ್ರೀಕರಣ ಮುಗಿಸಿದ್ದು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರತಂಡ ಚಿತ್ರದ ಟೀಸರ್‌ ಬಿಡುಗಡೆ ಮಾಡುತ್ತಿದೆ. ಹೌದು, "ಚಮಕ್‌' ಚಿತ್ರದ ಟೀಸರ್‌ ಇಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಶುರುವಾಗಿ ವರ್ಷವಾಗುತ್ತಾ ಬಂದರೂ ಚಿತ್ರತಂಡ ಟೀಸರ್‌ ಆಗಲೀ, ಟ್ರೇಲರ್‌ ಆಗಲೀ ಬಿಟ್ಟಿರಲಿಲ್ಲ. ಈಗ ಟೀಸರ್‌ ಬಿಡುಗಡೆ ಮಾಡುತ್ತಿದ್ದು, ಈ ಮೂಲಕ ಚಿತ್ರತಂಡ ಪ್ರಚಾರ ಶುರುವಿಟ್ಟುಕೊಂಡಿದೆ. 

ಈ ಚಿತ್ರವನ್ನು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. 

ಈ ಚಿತ್ರದಲ್ಲಿ ಗಣೇಶ್‌ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೂ ಹೆಚ್ಚಾಗಿ ಲವ್ವರ್‌ ಬಾಯ್‌ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಗಣೇಶ್‌, ಇದೇ ಮೊದಲ ಬಾರಿಗೆ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ. 

ಇನ್ನು,  "ಚಮಕ್‌'ನಲ್ಲಿ ಗಣೇಶ್‌ ಜೊತೆಗೆ ಮಗಳು ಚಾರಿತ್ರ್ಯ ಕೂಡಾ ನಟಿಸಿದ್ದಾರೆ. ಚಾರಿತ್ರ್ಯ ಇಲ್ಲೂ ಗಣೇಶ್‌ ಮಗಳಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಪ್ಪ-ಮಗಳ ಭಾವನಾತ್ಮಕ ಸನ್ನಿವೇಶಗಳಿದ್ದು, ಆ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. 

Trending videos

Back to Top