ಕಿರುತೆರೆಗೆ ರಾಗಿಣಿ
Team Udayavani, Nov 28, 2017, 11:07 AM IST
ಕನ್ನಡದ ಬಹುತೇಕ ನಟಿಮಣಿಗಳು ಈಗ ಕಿರುತೆರೆ ಅಂಗಳಕ್ಕೆ ಜಿಗಿಯುತ್ತಿದ್ದಾರೆ. ಆ ಸಾಲಿಗೆ ರಾಗಿಣಿ ಕೂಡ ಸೇರಿದ್ದಾರೆ. ಹೌದು, ಈ ಹಿಂದೆ ಸಣ್ಣಗಾಗಿ ಸುದ್ದಿಯಾದರು. ಇನ್ನೆಲ್ಲೋ ಅಭಿಮಾನಿಗಳ ಸಂಘ ಕಟ್ಟಿಕೊಂಡು ಸದ್ದು ಮಾಡಿದರು. ಈಗ ಹೊಸ ಸುದ್ದಿಯೆಂದರೆ, ಅವರೊಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅದಕ್ಕೆ ಪೂರಕ ಎಂಬಂತೆ ರಾಗಿಣಿ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಒಂದಷ್ಟು ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಆ ಫೋಟೋ ಜತೆಗೆ ಸುವರ್ಣ ವಾಹಿನಿಯಲ್ಲೊಂದು ಕಾಮಿಡಿ ಶೋ ನಡೆಸಿಕೊಡುವ ಕುರಿತು ಹೇಳಿಕೆಯೊಂದನ್ನು ನೀಡಿದ್ದಾರೆ. ಆದರೆ, ಆ ಶೋ ಯಾವುದು, ರಾಗಿಣಿ ಆ ಕಾರ್ಯಕ್ರಮದ ಜಡ್ಜ್ ಆಗಿರುತ್ತಾರೋ, ನಿರೂಪಣೆ ಮಾಡುತ್ತಾರೋ ಎಂಬುದು ಗೊತ್ತಿಲ್ಲ.
ಆ ಕಾಮಿಡಿ ಶೋ ಹೇಗಿರುತ್ತೆ ಎಂಬುದಕ್ಕೂ ಉತ್ತರವಿಲ್ಲ. ಆದರೆ, ರಾಗಿಣಿ ಈಗ ಶೋ ಮಾಡುತ್ತಿರುವುದಂತೂ ಹೌದು. ಆದರೆ, ಆ ಶೋ ಯಾವಾಗ ಶುರುವಾಗುತ್ತೆ, ಅದರ ರೂಪುರೇಷೆ ಹೇಗೆಲ್ಲಾ ಇರುತ್ತೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಸದ್ಯಕ್ಕೆ ಈ ಫೋಟೋವೊಂದೇ ಆ ಕಾರ್ಯಕ್ರಮ ಮಾಡುತ್ತಾರೆ ಅನ್ನುವುದಕ್ಕೆ ಸಾಕ್ಷಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ