ಮತ್ತೊಂದು ಭಾಗದಲ್ಲಿ ಮಂತ್ರಂ!

Team Udayavani, Dec 5, 2017, 11:35 AM IST

Mantram1.jpg

ಕನ್ನಡದಲ್ಲಿ ಹಾರರ್‌ ಚಿತ್ರಗಳ ಮುಂದುವರೆದ ಭಾಗ ಮೂಡುವುದು ತೀರಾ ವಿರಳ. ಹಾಗೆ ನೋಡಿದರೆ, ಕೆಲವು ಹಾರರ್‌ ಚಿತ್ರಗಳು ಭಾಗ 2ರಲ್ಲಿ ಕಾಣಿಸಿಕೊಳ್ಳುವ ಕುರಿತು ಈಗಾಗಲೇ ಸುದ್ದಿಯಾಗಿವೆ. ಈಗ ಆ ಸಾಲಿಗೆ “ಮಂತ್ರಂ’ ಚಿತ್ರವೂ ಸೇರಿದೆ. ಕಳೆದ ವಾರವಷ್ಟೇ “ಮಂತ್ರಂ’ ಬಿಡುಗಡೆಯಾಗಿದೆ. ಇದು ಪಕ್ಕಾ ಹಾರರ್‌ ಚಿತ್ರ. ಒಂದು ಸಿನಿಮಾದ ಮುಂದುವರೆದ ಭಾಗ ಬರುತ್ತೆ ಅಂದರೆ, ಮೊದಲ ಚಿತ್ರ ಯಶಸ್ಸು ಆಗಿರಲೇಬೇಕು.

ಇಲ್ಲವೇ, ಒಂದಷ್ಟು ಪ್ರಶ್ನೆಗಳನ್ನು ಉಳಿಸಿಕೊಂಡಿರಬೇಕು, ಆ ಪ್ರಶ್ನೆಗಳಿಗೆ ಮುಂದುವರೆದ ಭಾಗದಲ್ಲಿ ಉತ್ತರ ಕೊಡುವ ಕೆಲಸ ಚಿತ್ರತಂಡದಲ್ಲಾಗುತ್ತದೆ. ಇಲ್ಲೀಗ “ಮಂತ್ರಂ’ ಚಿತ್ರತಂಡ ಅಂತಹ ಹಲವು ಪ್ರಶ್ನೆಗಳಿಗೆ “ಮಂತ್ರಂ 2′ ನಲ್ಲಿ ಉತ್ತರ ಕೊಡಲು ಹೊರಟಿದೆ. “ಮಂತ್ರಂ’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಒಂದಷ್ಟು ಪ್ರಶ್ನೆಗಳನ್ನು ಬಿಡಲಾಗಿದೆ. ಸಮಾಜದ ವ್ಯವಸ್ಥೆ ಬದಲಾಗುವುದೇ ಇಲ್ಲವೇ ಎಂಬ ಪ್ರಶ್ನೆಯೂ ಇದೆ.

ಅದಷ್ಟೇ ಅಲ್ಲ, ಇನ್ನೂ ಅನೇಕ ವಿಷಯಗಳನ್ನು ಗೊಂದಲದಲ್ಲಿರಿಸಲಾಗಿದೆ. ಅವೆಲ್ಲದ್ದಕ್ಕೂ “ಮಂತ್ರಂ 2’ನಲ್ಲಿ ಉತ್ತರ ನೀಡಲು ಸಜ್ಜಾಗಿದ್ದಾರೆ ನಿರ್ದೇಶಕ ಸಜ್ಜನ್‌ ಮತ್ತು ನಿರ್ಮಾಪಕ ಅಮರ್‌ ಚೌದರಿ. ಅಂದಹಾಗೆ, ಇವರಿಬ್ಬರಿಗೂ “ಮಂತ್ರಂ’ ಮೊದಲ ಪ್ರಯತ್ನ. ಸಿನಿಮಾ ಬಿಡುಗಡೆ ಕಂಡಿದ್ದು ಕಡಿಮೆ ಚಿತ್ರಮಂದಿರಗಳಲ್ಲಾದರೂ, ಎಲ್ಲೆಡೆಯಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಖುಷಿ ಅವರದು.

ಹಾಗಾಗಿ, ಅದೇ ಖುಷಿಯಲ್ಲಿ ಮುಂದುವರೆದ ಭಾಗ ಮಾಡಲು ಸಜ್ಜಾಗಿರುವುದಾಗಿ ಹೇಳುತ್ತಾರೆ ಅಮರ್‌. “ಮಂತ್ರಂ’ ನಲ್ಲಿ ಆತ್ಮಕ್ಕೆ ನ್ಯಾಯ ಸಿಕ್ಕಿಲ್ಲ. ಹಾಗಾದರೆ, ವ್ಯವಸ್ಥೆ ಸರಿಯಿಲ್ಲವೇ? ಆ ವ್ಯವಸ್ಥೆಯನ್ನು ಸರಿಪಡಿಸಲು ಯಾರು ಬರುತ್ತಾರೆ. ಮುಂದುವರೆದ ಭಾಗದಲ್ಲೇನಾದರೂ ಆತ್ಮ ಪುನಃ ಎಂಟ್ರಿಕೊಡುತ್ತಾ? ಇಂತಹ ಹತ್ತಾರು ಪ್ರಶ್ನೆಗಳು ಬರುವುದು ಸಹಜ. ಇಲ್ಲಿ ಎಲ್ಲವೂ ಹೌದು.

ಆದರೆ, “ಮಂತ್ರಂ 2′ ಮಾತ್ರ ಹಾರರ್‌ಗೆ ಅಂಟಿಕೊಂಡಿಲ್ಲ ಎಂಬ ಉತ್ತರ ಅವರಿಂದ ಬರುತ್ತೆ. ಅಲ್ಲಿ ಪುಟ್ಟ ಜೀವವನ್ನು ಕಳೆದುಕೊಂಡ ಅಪ್ಪ ಏನು ಮಾಡುತ್ತಾನೆ. ಬರೀ ನಾಲ್ಕು ದಿನಗಳ ಹೋರಾಟಗಳಿಂದ ನ್ಯಾಯ ಪಡೆಯಲು ಸಾಧ್ಯವೇ? ಹಾಗಾದರೆ, ನ್ಯಾಯಕ್ಕಾಗಿ ಏನೆಲ್ಲಾ ನಡೆಯುತ್ತೆ ಎಂಬ ಅಪರೂಪದ ಅಂಶಗಳು “ಮಂತ್ರಂ 2’ನಲ್ಲಿರಲಿವೆಯಂತೆ. ಎಲ್ಲರೂ ಅಂದುಕೊಂಡಂತೆ “ಮಂತ್ರಂ 2′ ಹಾರರ್‌ ಚಿತ್ರವಲ್ಲ.

ಅದೊಂದು ಕ್ಲಾಸ್‌ ಸಿನಿಮಾ ಆಗಲಿದೆ. ಸಮಾಜದಲ್ಲಿರುವ ಕೆಟ್ಟ ವ್ಯವಸ್ಥೆಗೊಂದು ಪರಿಹಾರ ಕೊಡುವ ನಿಟ್ಟಿನಲ್ಲಿ ಚಿತ್ರ ಮೂಡಿಬರಲಿದೆ ಎನ್ನುತ್ತಾರೆ ಅಮರ್‌ ಚೌದರಿ. ಹಾಗಾದರೆ, “ಮಂತ್ರಂ 2′ ಚಿತ್ರದಲ್ಲಿ ಇದೇ ತಂಡ ಮುಂದುವರೆಲಿದೆಯಾ? ಖಂಡಿತ ಇಲ್ಲ, ಮುಂದುವರೆದ ಭಾಗದಲ್ಲಿ ನುರಿತ ಕಲಾವಿದರು ಇರಲಿದ್ದಾರೆ. ಇನ್ನೊಬ್ಬ ಹೀರೋ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಇಲ್ಲಿ ಕಮರ್ಷಿಯಲ್‌ ಅಂಶಕ್ಕಿಂತ ಸಮಾಜಕ್ಕೊಂದು ಸಂದೇಶ ಕೊಡುವ ಉದ್ದೇಶದಿಂದ ಈ ಚಿತ್ರ ಮಾಡಲಾಗುತ್ತಿದೆ. ಚಿತ್ರಕ್ಕೆ ರವಿಬಸ್ರೂರ್‌ ಸಂಗೀತದ ಜೊತೆ ಹಿನ್ನೆಲೆ ಸಂಗೀತ ಕೊಡಲಿದ್ದಾರೆ. ಈ ಬಾರಿ ಕೆ.ಎಂ.ಪ್ರಕಾಶ್‌ ಅವರು ಕತ್ತರಿ ಹಿಡಿಯಲಿದ್ದಾರೆ. ಉಳಿದಂತೆ “ಬಾಹುಬಲಿ’ ಸಿನಿಮಾದಲ್ಲಿ ಗ್ರಾಫಿಕ್ಸ್‌ ಕೆಲಸ ಮಾಡಿದ್ದ ತಂತ್ರಜ್ಞರೇ “ಮಂತ್ರಂ 2′ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ. ಬಿಗ್‌ಬಜೆಟ್‌ನಲ್ಲೇ ಚಿತ್ರ ತಯಾರಾಗಲಿದೆ ಎಂಬುದು ಅಮರ್‌ ಮಾತು.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.