CONNECT WITH US  

ರಾಜಮಾರ್ತಾಂಡನಿಗೆ ಮುಹೂರ್ತ

ಚಿರಂಜೀವಿ ಸರ್ಜಾ ಸಿನಿಮಾಗಳು ಸದ್ದಿಲ್ಲದೇ ಸೆಟ್ಟೇರುತ್ತಲೇ ಇವೆ. ಒಂದರ ಹಿಂದೊಂದರಂತೆ ಸಿನಿಮಾ ಮಾಡುತ್ತಾ ಬರುತ್ತಿರುವ ಚಿರಂಜೀವಿ ಸರ್ಜಾ ಅವರ ಹೊಸ ಚಿತ್ರವೊಂದು ಬುಧವಾರ ಆರಂಭವಾಗಿದೆ. ಅದು "ರಾಜಮಾರ್ತಾಂಡ'. ಈ ಚಿತ್ರವನ್ನು ರಾಮ್‌ನಾರಾಯಣ್‌ ನಿರ್ದೇಶಿಸುತ್ತಿದ್ದಾರೆ.

ರಾಮ್‌ ನಾರಾಯಣ್‌ ನಿರ್ದೇಶನದ "ಕ್ರ್ಯಾಕ್‌' ಚಿತ್ರ ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಈಗ ಚಿರಂಜೀವಿ ಜೊತೆ "ರಾಜಮಾರ್ತಾಂಡ' ಮಾಡುತ್ತಿದ್ದಾರೆ. ಈ ಚಿತ್ರವನ್ನು ಶಿವಕುಮಾರ್‌ ಎನ್‌ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಚಿರು ಜೊತೆ "ಅಜಿತ್‌' ಸಿನಿಮಾ ಮಾಡಿದ ಅವರು ಈಗ "ರಾಜಮಾರ್ತಾಂಡ' ಮಾಡುತ್ತಿದ್ದಾರೆ. 

ಇದೊಂದು ಆ್ಯಕ್ಷನ್‌ ಜೊತೆಗೆ ಸೆಂಟಿಮೆಂಟ್‌ ಅಂಶಗಳೊಂದಿಗೆ ಸಾಗುವ ಸಿನಿಮಾವಾಗಿದ್ದು, ತನ್ನ ಸಾಮರ್ಥ್ಯದಿಂದ ಏನು ಬೇಕಾದರೂ ಪಡೆದುಕೊಳ್ಳುವ ವ್ಯಕ್ತಿಯಾಗಿ ಚಿರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಜಬೇಜ್‌ ಕೆ ಗಣೇಶನ್‌ ಛಾಯಾಗ್ರಹಣವಿದೆ. ನಾಯಕಿ ಸೇರಿದಂತೆ ಇತರ ಕಲಾವಿದರ ಆಯ್ಕೆ ನಡೆಯಬೇಕಿದೆ. ಈ ತಿಂಗಳಾಂತ್ಯದಿಂದ ಚಿತ್ರೀಕರಣ ಆರಂಭವಾಗಲಿದೆ. 

Trending videos

Back to Top