ಒಟ್ಟಿಗೆ ಬಂದವರು ಒಟ್ಟಾದರು!


Team Udayavani, Dec 6, 2017, 4:42 PM IST

viji-gani.jpg

ಕನ್ನಡ ಚಿತ್ರರಂಗದಲ್ಲೀಗ ಮಲ್ಟಿಸ್ಟಾರ್‌ ಸಿನಿಮಾಗಳದ್ದೇ ಅಬ್ಬರ. ಈಗ ಹೊಸ ಸುದ್ದಿಯೆಂದರೆ, ಇದೇ ಮೊದಲ ಸಲ ಸ್ಟಾರ್‌ ನಟರಿಬ್ಬರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ದುನಿಯಾ ವಿಜಯ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಇವರಿಬ್ಬರು ಜೊತೆಯಾಗಿ ನಟಿಸಲು ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಈ ಮಾತನ್ನು ಸ್ವತಃ ಗಣೇಶ್‌ ಮತ್ತು ವಿಜಯ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಇಬ್ಬರು ಆತ್ಮೀಯ ಗೆಳೆಯರು. ಒಂದೇ ಸಲ ಚಿತ್ರರಂಗಕ್ಕೆ ಕಾಲಿಟ್ಟವರು.

ಅಷ್ಟೇ ಯಾಕೆ, “ಮುಂಗಾರು ಮಳೆ’ ಮೂಲಕ ಗಣೇಶ್‌ ಯಶಸ್ವಿ ನಟ ಎನಿಸಿಕೊಂಡರೆ, “ದುನಿಯಾ’ ಮೂಲಕ ವಿಜಯ್‌ ಸಕ್ಸಸ್‌ ಕಂಡರು. ಅಲ್ಲಿಂದ ಇಲ್ಲಿಯವರೆಗೆ ಯಶಸ್ಸಿನ ಹಾದಿಯಲ್ಲೇ ಸಾಗಿ ಬಂದಿರುವ ಗಣೇಶ್‌ ಮತ್ತು ವಿಜಯ್‌, ಒಂದು ದಶಕದ ಬಳಿಕ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲು ಉತ್ಸಾಹದಲ್ಲಿದ್ದಾರೆ. ಅಂದಹಾಗೆ, ಇವರಿಬ್ಬರನ್ನೂ ಒಂದೇ ಚಿತ್ರದಲ್ಲಿ ತೋರಿಸಲು ಹೊರಟಿರುವುದು ಪ್ರೀತಂ ಗುಬ್ಬಿ.

ಇಬ್ಬರಿಗೂ ಹೊಂದಿಕೆಯಾಗುವಂತಹ ಕಥೆಯೊಂದನ್ನು ಹೆಣೆಯಲು ಸಜ್ಜಾಗಿರುವ ಪ್ರೀತಂ, ಇಬ್ಬರಿಗೋಸ್ಕರ ಪಕ್ಕಾ ಸ್ವಮೇಕ್‌ ಕಥೆಯೊಂದನ್ನು ಹೆಣೆದು, ಇಬ್ಬರು ಅಭಿಮಾನಿಗಳ ಅಭಿರುಚಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಸದ್ಯಕ್ಕೆ ಗಣೇಶ್‌ ಮತ್ತು ವಿಜಯ್‌ ಒಂದೇ ಚಿತ್ರದಲ್ಲಿ ನಟಿಸುವುದಂತೂ ನಿಜ. ಇಬ್ಬರೂ ಒಪ್ಪಿಗೆ ಕೊಟ್ಟಾಗಿದೆ.

ಆದರೆ, ಕಥೆ ಯಾವುದು, ತಂತ್ರಜ್ಞರು ಯಾರ್ಯಾರು ಇರುತ್ತಾರೆ, ಕಲಾವಿದರು ಯಾರೆಲ್ಲ ಕಾಣಿಸಿಕೊಳ್ಳುತ್ತಾರೆ. ನಾಯಕಿಯರು ಯಾರು ಎಂಬಿತ್ಯಾದಿ ಮಾಹಿತಿ ಇಲ್ಲ. 2018 ರಲ್ಲಿ ಇವರಿಬ್ಬರು ನಟಿಸಿರುವ ಚಿತ್ರ ಅಭಿಮಾನಿಗಳ ಮುಂದೆ ಬರುವುದಂತು ಗ್ಯಾರಂಟಿ. ಒಂದೇ ಚಿತ್ರದಲ್ಲಿ ನಟಿಸುವ ಕುರಿತು ಗಣೇಶ್‌ ಮತ್ತು ವಿಜಯ್‌ ಇಬ್ಬರು ಸಹ “ಉದಯವಾಣಿ’ ಜತೆ ಮಾತಾಡಿದ್ದಾರೆ. “ಇಬ್ಬರೂ ಒಂದೇ ಸಲ ಯಶಸ್ಸು ಕಂಡವರು.

ಇಬ್ಬರಿಗೂ ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಆದರೆ ಆಗಿರಲಿಲ್ಲ. ವಿಜಿಗೆ ಅವರದೇ ಆದಂತಹ ಮ್ಯಾನರಿಸಂ ಇದೆ. ದೊಡ್ಡ ಅಭಿಮಾನಿ ವರ್ಗವೂ ಇದೆ. ನಾನು ಮತ್ತು ವಿಜಿ ಇಬ್ಬರು ಒಂದೇ ಚಿತ್ರದಲ್ಲಿ ನಟಿಸ್ತೀವಿ ಅಂದಾಗ, ನಿರೀಕ್ಷೆಗಳು ದೊಡ್ಡದಾಗಿರುತ್ತವೆ. ಅದಕ್ಕೆ ತಕ್ಕಂತಹ ಕಥೆ ಬೇಕು. ಆ ಜವಾಬ್ದಾರಿಯನ್ನು ಪ್ರೀತಂ ಗುಬ್ಬಿ ವಹಿಸಿಕೊಂಡಿದ್ದಾರೆ. ಇಷ್ಟು ವರ್ಷ ನಾನು ಮತ್ತು ವಿಜಿ ಜೊತೆಯಲ್ಲೇ ಕೆಲಸ ಮಾಡಿಕೊಂಡು ಬಂದಿದ್ದೇವೆ.

ಇಬ್ಬರಿಗೂ ಆಸೆ ಇತ್ತು. ಅದೀಗ ಶುರುವಾಗುವ ಲಕ್ಷಣಗಳು ಕಾಣುತ್ತಿವೆ. ಇನ್ನು, ನಮ್ಮಿಬ್ಬರ ಚಿತ್ರ ನನ್ನ ಗೋಲ್ಡನ್‌ ಮೂವೀಸ್‌ ಬ್ಯಾನರ್‌ನಲ್ಲಿ ಆಗಬೇಕು ಎಂಬ ಆಸೆ ನನ್ನದು. ನನ್ನೊಂದಿಗೆ ಬೇರೆಯವರು ಸೇರಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಎಷ್ಟೋ ಮಂದಿ ನೀವಿಬ್ಬರು ನಟಿಸುವ ಸಿನಿಮಾವನ್ನು ನಾವು ನಿರ್ಮಿಸುತ್ತೇವೆ ಅಂತ ಹೇಳುತ್ತಿದ್ದಾರೆ. ಆದರೆ, ನಾವಿನ್ನೂ ನಿರ್ಧರಿಸಿಲ್ಲ. ಈಗ ಒಳ್ಳೆಯ ಸಮಯ ಬಂದಿದೆ.

ಪ್ರೀತಂ ಜನವರಿಯಿಂದ ಸ್ಕ್ರಿಪ್ಟ್ ಶುರು ಮಾಡಲಿದ್ದಾರೆ’ ಎಂದು ಹೇಳುತ್ತಾರೆ ಗಣೇಶ್‌. ವಿಜಿ ಕೂಡಾ ಖುಷಿಯಿಂದ ಈ ಸಿನಿಮಾ ಬಗ್ಗೆ ಮಾತನಾಡುತ್ತಾರೆ. “ನಾನು ಮತ್ತು ಗಣಿ ಜತೆಯಲ್ಲೇ ಬೆಳೆದು ಬಂದಿದ್ದೇವೆ. ಒಟ್ಟಿಗೆ ಗೆಲುವು ಕಂಡಿದ್ದೇವೆ. ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಎಷ್ಟೋ ಅವಮಾನಗಳನ್ನೂ ಸಹಿಸಿಕೊಂಡಿದ್ದೇವೆ. ಆದರೆ, ನಾವು ಯಾವತ್ತೂ ಹಿಂದಿನದ್ದನ್ನು ಮರೆತಿಲ್ಲ.

ಗೆಲುವು, ಸೋಲು ಏನೇ ಇದ್ದರೂ, ಇಬ್ಬರೂ ಒಂದೇ ರೀತಿ ಇದ್ದೇವೆ. ಇಬ್ಬರಿಗೂ ಜತೆಯಾಗಿ ಒಂದು ಸಿನಿಮಾ ಮಾಡುವ ಆಸೆ ಇತ್ತು. ಆದರೆ ಆಗಿರಲಿಲ್ಲ. ನಾವು ಸರಿಯಾಗಿ ನೆಲೆಕಂಡು ಒಂದು ದಶಕ ಕಳೆದಿದೆ. ಹಾಗಾಗಿ ಆ ನೆನಪಿಗೊಂದು ಭರ್ಜರಿ ಸಿನಿಮಾ ಕೊಡುವ ಉದ್ದೇಶವಿದೆ. ಕಷ್ಟದ ದಿನಗಳಲ್ಲಿ ಜತೆಯಾಗಿದ್ದವರು ನಾವು.

ಈಗ ಚೆನ್ನಾಗಿದ್ದೇವೆ. ಈಗ ನಮ್ಮ ಅಭಿಮಾನಿಗಳಿಗೊಂದು ಒಳ್ಳೆಯ ಚಿತ್ರ ಕೊಡುವ ಮನಸ್ಸು ಮಾಡಿದ್ದೇವೆ. ಮುಂದಿನ ವರ್ಷ ನಮ್ಮಿಬ್ಬರ ಕಾಂಬಿನೇಷನ್‌ನಲ್ಲೊಂದು ಚಿತ್ರ ಬರುವುದು ಪಕ್ಕಾ’ ಎಂದು ಹೇಳುತ್ತಾರೆ ವಿಜಯ್‌.  ಗಣೇಶ್‌ “ಆರೆಂಜ್‌’ ಹಾಗೂ ವಿಜಯ್‌ “ಜಾನಿ ಜಾನಿ ಯೆಸ್‌ ಪಪ್ಪಾ’ ಮುಗಿಸಿದ ನಂತರ ಈ ಸಿನಿಮಾ ಆರಂಭವಾಗಬಹುದು. 

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.