CONNECT WITH US  

ರಾಜ್‌ ಶೆಟ್ಟಿ ಮಲಯಾಳಂ ಸಿನ್ಮಾ: ರೌಡಿ ಮೊಟ್ಟೆ

ರಾಜ್‌ ಬಿ ಶೆಟ್ಟಿ - ಈ ಹೆಸರು ಕನ್ನಡ ಚಿತ್ರರಂಗದ ಮಂದಿಗೆ ಗೊತ್ತಾಗುವಂತೆ ಮಾಡಿದ್ದು "ಒಂದು ಮೊಟ್ಟೆಯ ಕಥೆ' ಸಿನಿಮಾ. ಕಡಿಮೆ ಬಜೆಟ್‌ನಲ್ಲಿ, ಹೊಸ ಕಾನ್ಸೆಪ್ಟ್ನೊಂದಿಗೆ ರಾಜ್‌ ಶೆಟ್ಟಿ ತಾವೇ ನಿರ್ದೇಶಿಸಿ, ನಾಯಕರಾಗಿಯೂ ನಟಿಸಿದರು. ಚಿತ್ರವನ್ನು ಜನ ಇಷ್ಟಪಟ್ಟರು. ರಾಜ್‌ ಶೆಟ್ಟಿಗೂ ಹೆಸರು ಬಂತು. ಇಂತಿಪ್ಪ ರಾಜ್‌ ಬಿ ಶೆಟ್ಟಿ ಈಗ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸಲು ಹೊರಟಿದ್ದಾರೆ.

ಆ ಚಿತ್ರದ ಹೆಸರು "ಫಿಕ್ಷನ್‌'. ಈಗಾಗಲೇ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ರಾಜ್‌ ಶೆಟ್ಟಿ ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರು ಆ ಚಿತ್ರದಲ್ಲಿ ಮಾಡುತ್ತಿರೋದು ಒಬ್ಬ ರೌಡಿಯ ಪಾತ್ರ. ಮಲಯಾಳಂನ "ಫಿಕ್ಷನ್‌' ಚಿತ್ರದಲ್ಲಿ ರಾಜ್‌ ಶೆಟ್ಟಿ ರೌಡಿಯ ಪಾತ್ರ ಮಾಡುತ್ತಿದ್ದಾರೆ. ಹಾಗಂತ ಇದು ರೆಗ್ಯುಲರ್‌ ಪ್ಯಾಟರ್ನ್ ಸಿನಿಮಾವಲ್ಲ.

ಹಾಗಾಗಿ, ಇವರ ಪಾತ್ರ ಕೂಡಾ ವಿಭಿನ್ನವಾಗಿದೆ. ಊರು ಬಿಟ್ಟು ಬಂದ ರೌಡಿಯೊಬ್ಬ ಏನೋ ಬೇಕೆಂಬ ಬಯಕೆಯೊಂದಿಗೆ ಓಡಾಡುತ್ತಿರುತ್ತಾನೆ. ಆದರೆ, ಆತನಿಗೆ ತನಗೇನು ಬೇಕು ಎಂಬ ಬಗ್ಗೆ ಅರಿವಿರೋದಿಲ್ಲ. ಈ ತರಹದ ಒಂದು ವಿಭಿನ್ನ ರೌಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮಣಿಪಾಲದ ಮಾಸ್‌ ಕಮ್ಯುನಿಕೇಶನ್‌ ಓದುತ್ತಿರುವ ಕೆಲವು ವಿದ್ಯಾರ್ಥಿಗಳು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ ಕೆಲವು ಶಾರ್ಟ್‌ಫಿಲಂ ಮಾಡಿರುವ ಆ ವಿದ್ಯಾರ್ಥಿಗಳು ಮೊದಲ ಬಾರಿಗೆ ಫೀಚರ್‌ ಫಿಲಂ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ. ರಾಜ್‌ ಶೆಟ್ಟಿ ಕಡಿಮೆ ಬಜೆಟ್‌ನಲ್ಲಿ "ಒಂದು ಮೊಟ್ಟೆಯ ಕಥೆ' ಸಿನಿಮಾ ಮಾಡಿದ್ದನ್ನು ನೋಡಿ, ಅವರ ಬಳಿ ಆ ವಿದ್ಯಾರ್ಥಿಗಳು ಬಂದು ಸಿನಿಮಾ ಬಗ್ಗೆ ಟಿಪ್ಸ್‌ ಕೇಳಿದರಂತೆ.

ಜೊತೆಗೆ ರಾಜ್‌ ಶೆಟ್ಟಿ ಅವರಲ್ಲಿ ಒಂದು ಪಾತ್ರ ಮಾಡುವಂತೆಯೂ ಕೇಳಿಕೊಂಡರಂತೆ. ಅದರಂತೆ ನಟಿಸಲು ಒಪ್ಪಿದ್ದಾರೆ ರಾಜ್‌. ಇದು ಬಿಟ್ಟರೆ ಜನವರಿಯಲ್ಲಿ ಪುನೀತ್‌ ರಾಜಕುಮಾರ್‌ ಅವರ ಬ್ಯಾನರ್‌ನಲ್ಲಿ ಮತ್ತೂಂದು ಸಿನಿಮಾ ಆರಂಭವಾಗುತ್ತಿದ್ದು, ಆ ಚಿತ್ರದಲ್ಲೂ ರಾಜ್‌ ಶೆಟ್ಟಿಗೆ ಪ್ರಮುಖ ಪಾತ್ರವಿದೆ. ಇದರ ಹೊರತಾಗಿ ರಾಜ್‌ ಶೆಟ್ಟಿ ಮತ್ತೂಂದು ಸಿನಿಮಾದಲ್ಲಿ ಕ್ಯಾಬ್‌ ಡ್ರೈವರ್‌ ಆಗಿ ನಟಿಸಿದ್ದಾರೆ. 

Trending videos

Back to Top