ಮುಖ್ಯಮಂತ್ರಿಗಳಿಗೆ ಸುದೀಪ್‌ ನೀಡಿದ ಪತ್ರದಲ್ಲೇನಿದೆ ಗೊತ್ತಾ?


Team Udayavani, Dec 11, 2017, 3:01 PM IST

sudeep-siddu].jpg

ಇಂದು ಬೆಳಿಗ್ಗೆ ನಟ ಸುದೀಪ್‌ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ, ಕೆಲವು ಕಾಲ ಮಾತುಕತೆ ನಡೆಸಿದ್ದಾರೆ. ಪ್ರಮುಖವಾಗಿ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣದ ವಿಷಯದ ಕುರಿತು ಮಾತನಾಡಿರುವ ಸುದೀಪ್‌, ಈ ಕುರಿತು ಮುಖ್ಯಮಂತ್ರಿಗಳಿಗೆ ಒಂದು ಪತ್ರವನ್ನೂ ಸಲ್ಲಿಸಿದ್ದಾರೆ. ಇಷ್ಟಕ್ಕೂ ಆ ಪತ್ರದಲ್ಲೇನಿದೆ ಗೊತ್ತಾ? ಓದಿ ನೋಡಿ …

ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಡಾ. ವಿಷ್ಣುವರ್ಧನ ಅವರ ಸ್ಮಾರಕ ನಿರ್ಮಾಣದ ವಿಷಯಕ್ಕೆ ತಾರ್ಕಿಕ ಅಂತ್ಯವನ್ನು ಒದಗಿಸಲು ಇದು ಸಕಾಲವೆಂದು ಭಾವಿಸುತ್ತೇನೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಿದ್ದರೂ ಸಹ, ಅಂತ್ಯ ಸಂಸ್ಕಾರವಾದ ಜಾಗದಲ್ಲಿಯೇ ಅವರ ನೆನಪಿನ ಸ್ಮಾರಕ ಇರಬೇಕೆಂಬುದು ಕನ್ನಡಿಗರ ಮತ್ತು ಅವರ ಅಸಂಖ್ಯಾತ ಅಭಿಮಾನಿಗಳ ಕೋರಿಕೆಯಾಗಿರುವುದು ತಮಗೆ ತಿಳಿಯದ ವಿಷಯವೇನಲ್ಲ.

ಡಾ.ಭಾರತಿ ವಿಷ್ಣುವರ್ಧನ್‌ ಅವರ ಇಚ್ಛೆಯಂತೆ ಮೈಸೂರಿನಲ್ಲಿಯೇ ಸ್ಮಾರಕವಾಗುವುದಾದರೆ, ಯಾರ ಅಂಭ್ಯಂತರವೂ ಇಲ್ಲ. ಆದರೆ, ಅಭಿಮಾನ್‌ ಸ್ಟುಡಿಯೋದಲ್ಲಿ ಸ್ಮಾರಕದ ಬದಲಾಗಿ ಅವರ ಅಂತ್ಯ ಸಂಸ್ಕಾರವಾದ ಜಾಗದ ಒಂದು ಎಕರೆ ಪ್ರದೇಶವನ್ನು “ಡಾ.ವಿಷ್ಣುವರ್ಧನ ಪುಣ್ಯ ಭೂಮಿ’ ಎಂದು ಗುರುತಿಸಿ, ಅಭಿವೃದ್ಧಿಪಡಿಸಲು ಕೋರುತ್ತೇನೆ.

ಒಂದು ವೇಳೆ, ಒಂದು ಕಡೆ ಸ್ಮಾರಕ ಮತ್ತೂಂದು ಕಡೆ ಪುಣ್ಯಭೂಮಿ ಎಂದು ಅಭಿವೃದ್ಧಿಪಡಿಸುವುದು ಸರ್ಕಾರಿ ನಿಯಮಗಳಿಗೆ ವಿರುದ್ಧ ಎನ್ನುವುದಾದರೆ, ಕೇವಲ ಒಂದು ಎಕರೆ ಜಾಗವನ್ನು ಕೊಟ್ಟರೆ, ಡಾ.ವಿಷ್ಣುವರ್ಧನ ಅವರ ಹಿತೈಷಿಗಳಾದ ನಾವು ಮತ್ತು ಅವರ ಅಭಿಮಾನಿಗಳು ಸೇರಿ ಡಾ.ವಿಷ್ಣುವರ್ಧನ ಪುಣ್ಯಭೂಮಿಯನ್ನು ಅಭಿಮಾನಿಗಳಿಗಾಗಿ ಈ ಪುಣ್ಯಭೂಮಿ ಅಭಿವೃದ್ಧಿಗೆ ಸಂಕಲ್ಪ ಹೊಂದಬೇಕೆಂದು ಈ ಮೂಲಕ ಕೋರುತ್ತೇನೆ.

ಇದೇ ಡಿಸೆಂಬರ್‌ 30 ಕ್ಕೆ ಡಾ.ವಿಷ್ಣುವರ್ಧನ್‌ ಅವರ 8 ನೇ ಪುಣ್ಯಸ್ಮರಣೆ ಇರುವುದರಿಂದ, ತಾವು ಆದಷ್ಟು ಬೇಗ ಈ ವಿಷಯಕ್ಕೆ ತಾರ್ಕಿಕ ಅಂತ್ಯವನ್ನು ಒದಗಿಸಿದರೆ, ಹಿಂದಿನ ಸರ್ಕಾರದಲ್ಲಿ ಘೋಷಣೆಯಾಗಿದ್ದ ಸ್ಮಾರಕ ಯೋಜನೆಯನ್ನು ಸಾಕಾರಗೊಳಿಸಿದ ಕೀರ್ತಿ ತಮ್ಮದಾಗುತ್ತದೆ ಮತ್ತು ಅಸಂಖ್ಯಾತ ವಿಷ್ಣು ಅಭಿಮಾನಿಗಳ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗುತ್ತದೆ.

ಈ ಸ್ಮಾರಕದ ವಿಷಯ ಪರಿಹಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಾಧ್ಯತೆಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇವುಗಳು ಖಂಡಿತ ಸಹಕಾರಿಯಾಗಬಲ್ಲದೆಂದು ನಂಬಿದ್ದೇನೆ.

1. ಅಭಿಮಾನ್‌ ಸ್ಟುಡಿಯೋದಲ್ಲಿ ಡಾ. ವಿಷ್ಣುವರ್ಧನ ಸ್ಮಾರಕಕ್ಕಾಗಿ ನಿಗದಿಪಡಿಸಿರುವ ಎರಡು ಎಕರೆ ಜಾಗದ ಬದಲು ಒಂದು ಅಥವಾ ಅರ್ಧ ಎಕರೆ ಜಾಗವನ್ನು ಅಖೈರುಗೊಳಿಸುವುದು.

2. ದಿ.ಬಾಲಕೃಷ್ಣ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವುದು. ಅಭಿಮಾನ್‌ ಸ್ಟುಡಿಯೋ ಸರ್ಕಾರಿ ಜಮೀನಾಗಿರುವ ಕಾರಣ, ಸರ್ಕಾರವೇ ಅದಕ್ಕೆ ಪರಿಹಾರ ಹಣ ಕೊಟ್ಟು ಖರೀದಿಸಲಾಗುವುದಿಲ್ಲವೆಂದರೆ, ಅದನ್ನು ಖರೀದಿಸಲು ವಿಷ್ಣು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡುವುದು.

3. ಅಭಿಮಾನ್‌ ಸ್ಟುಡಿಯೋದ ಮೇಲೆ ಸರ್ಕಾರ ಹಾಕಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯುವುದು.

4. ಈ ಸಂಬಂಧ ಬಾಲಕೃಷ್ಣ ಅವರ ಕುಟುಂಬದ ಜೊತೆ ಖುದ್ದಾಗಿ ತಾವೇ ಒಂದು ಸಭೆ ನಡೆಸಿದರೆ ಖಂಡಿತ ಅವರು ಒಪ್ಪುತ್ತಾರೆ ಎಂಬುದು ನನ್ನ ಖಚಿತ ನಿಲುವು.

ಈ ಸಾಧ್ಯತೆಗಳು ನನ್ನ ತಿಳುವಳಿಕೆಗೆ ಸಂಬಂಧಿಸಿರುವುಗಳೇ ಆಗಿವೆ. ಈ ಸಾಧ್ಯತೆಗಳನ್ನು ತಾವು ಬಳಸುವುದು ಅಥವಾ ಸರ್ಕಾರಿ ನಿಮಗಳನುಸಾರ ಮುಂದುವರಿಯುವುದು ತಮ್ಮ ವಿವೇಚನೆಗೆ ಬಿಟ್ಟ ಸಂಗತಿಗಳಾಗಿವೆ. ದಯಮಾಡಿ ಡಾ.ವಿಷ್ಣುವರ್ಧನ ಅವರ ಪುಣ್ಯ ಭೂಮಿ ನಿರ್ಮಾಣಕ್ಕೆ ಡಿಸೆಂಬರ್‌ 30ರ ಒಳಗೆ ತಾರ್ಕಿಕ ಅಂತ್ಯ ಒದಗಿಸಬೇಕೆಂದು ವಿನಂತಿಸುತ್ತೇನೆ.

ವಂದನೆಗಳೊಂದಿಗೆ…
ತಮ್ಮ ವಿಶ್ವಾಸಿ,
ಕಿಚ್ಚ ಸುದೀಪ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.