ಡಿ 16ಕ್ಕೆ ಅಭಿಮನ್ಯು ಟೀಸರ್
Team Udayavani, Dec 14, 2017, 11:41 AM IST
ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಈಗ ಡಿಸೆಂಬರ್ 16ರಕ್ಕೆ ಚಿತ್ರದ ಎರಡನೆಯ ಟೀಸರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಈ ಬಾರಿ ಅಭಿಮನ್ಯುವನ್ನು ಪರಿಚಯಿಸುವಂತಹ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ.
“ಕುರುಕ್ಷೇತ್ರ’ ಚಿತ್ರದಲ್ಲಿ ನಿಖೀಲ್ ಕುಮಾರ್, ಅಭಿಮಾನ್ಯು ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೂ ಸುಮಾರು 70 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗಿದೆ. ಡಿಸೆಂಬರ್ 16ರಂದು ನಿಖೀಲ್ ತಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಇರುವುದರಿಂದ ಅಂದೇ ನಿಖೀಲ್ ಅವರ ಟೀಸರ್ ಬಿಡುಗಡೆಯಾಗುತ್ತಿದೆ. ಈ ಟೀಸರ್ ಮೂಲಕ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲು ಹೊರಟಿದ್ದಾರೆ ನಿಖೀಲ್.