ಕಿಚ್ಚುವಿನಲ್ಲಿ ಕಿಚ್ಚ ಗೆಸ್ಟ್
Team Udayavani, Dec 16, 2017, 12:43 PM IST
ಸುದೀಪ್ ಸದ್ದಿಲ್ಲದೇ ಸಿನಿಮಾವೊಂದರಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಅದು “ಕಿಚ್ಚು’ವಿನಲ್ಲಿ. “ರಾಜು ಕನ್ನಡ ಮೀಡಿಯಂ’ನಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿರೋದು ನಿಮಗೆ ಗೊತ್ತಿದೆ. “ಕಿಚ್ಚು’ವಿನಲ್ಲಿ ಯಾವಾಗ ಮಾಡಿದ್ರು ಎಂದು ನೀವು ಕೇಳಬಹುದು. ಸುಮಾರು ಆರು ತಿಂಗಳ ಹಿಂದೆಯೇ ಸುದೀಪ್ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದಾರೆ.
“ಕಿಚ್ಚು’ವಿನಲ್ಲಿ ಸುದೀಪ್ ಸುಮಾರು 10 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದು, ಅವರಿಲ್ಲಿ ಸಮಾಜ ಸೇವೆ ಮಾಡುವ ಡಾಕ್ಟರ್ ಪಾತ್ರ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಡು ಉಳಿಸಿ ಎಂಬ ಕಾನ್ಸೆಪ್ಟ್ನಡಿ ಈ ಸಿನಿಮಾ ತಯಾರಾಗಿದ್ದು, ಪ್ರದೀಪ್ರಾಜ್ ಚಿತ್ರದ ನಿರ್ದೇಶಕರು.
ಇತ್ತೀಚೆಗೆ ನಿಧನರಾದ ಧ್ರುವ ಶರ್ಮಾ ಈ ಚಿತ್ರದ ನಾಯಕ. ಅಭಿನಯ ನಾಯಕಿ. ಚಿತ್ರದಲ್ಲಿ ರಾಗಿಣಿ ಪ್ರಮುಖ ಪಾತ್ರ ಮಾಡಿದ್ದು, ಕಾಫಿಎಸ್ಟೇಟ್ನ ಕೆಲಸಗಾರ್ತಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸಾಯಿಕುಮಾರ್, ಸುಚೇಂದ್ರ ಪ್ರಸಾದ್ ಕೂಡಾ ನಟಿಸಿದ್ದು, ಡಿ.22ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ