ಕೆಲಸ ಕಳೆದುಕೊಂಡು ಕೆಲಸ ಮಾಡಿದ್ದರವರೆಗೆ…

Team Udayavani, Jan 2, 2018, 11:06 AM IST

KANAKA.jpg

ನಿರ್ದೇಶಕ ಆರ್‌.ಚಂದ್ರು ಹಾಗೂ “ದುನಿಯಾ’ ವಿಜಯ್‌ ಈಗ “ಕನಕ’ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತಿದೆ. ಆದರೆ, ಈ ಇಬ್ಬರು 2003ರಲ್ಲೂ ಜೊತೆಯಾಗಿ ಕೆಲಸ ಮಾಡಿದ್ದರು ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. 2003ರಲ್ಲಿ ಚಂದ್ರು ಹಾಗೂ ವಿಜಯ್‌ ಒಟ್ಟಿಗೆ ಧಾರಾವಾಹಿಯೊಂದರಲ್ಲಿ ಕೆಲಸ ಮಾಡಿದ್ದರು. ಅದರ ಎಫೆಕ್ಟ್ ಹೇಗಿತ್ತೆಂದರೆ ಅಂದು ಆರ್‌. ಚಂದ್ರು ಕೆಲಸವೇ ಕಳೆದುಕೊಂಡಿದ್ದರು!

ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. 2003ರಲ್ಲಿ ಆರ್‌. ಚಂದ್ರು ಧಾರಾವಾಹಿಯೊಂದರಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ವಿಜಯ್‌ ಕೂಡಾ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ದಿನ ಅದು. ಇನ್ನೂ “ದುನಿಯಾ’ ಬಂದಿರಲಿಲ್ಲ. ಸಹಜವಾಗಿಯೇ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ದಿನಗಳು. ಸಣ್ಣಪುಟ್ಟ ಪಾತ್ರಗಳಿಗೂ ತೃಪ್ತಿ ಪಡಬೇಕಾದ ದಿನಗಳಲ್ಲೂ ವಿಜಯ್‌ ತಮ್ಮ ಪ್ರತಿಭೆ ತೋರಿಸುತ್ತಿದ್ದರು.

ಹೀಗಿರುವಾಗ ಚಂದ್ರು ಸಹಾಯಕ ನಿರ್ದೇಶಕರಾಗಿದ್ದ ಧಾರಾವಾಹಿಯಲ್ಲಿ ಒಂದು ಸಣ್ಣ ಪಾತ್ರವಿತ್ತು. ಚಂದ್ರುಗೆ ವಿಜಯ್‌ ಪರಿಚಯವಿದ್ದ ಕಾರಣ, ಅದನ್ನು ಅವರಿಂದ ಮಾಡಿಸಿಬಿಟ್ಟಿದ್ದಾರೆ. ಆದರೆ, ಆ ಚಿತ್ರದ ನಿರ್ದೇಶಕರಿಗೆ ಅದನ್ನು ಬೇರೆಯರಿಂದ ಮಾಡಿಸಬೇಕೆಂಬ ಆಸೆ ಇತ್ತಂತೆ. ಚಂದ್ರು, ವಿಜಯ್‌ ಅವರಿಂದ ಮಾಡಿಸಿ ಕಳುಹಿಸಿದ್ದರಿಂದ ಸಿಟ್ಟಾದ ನಿರ್ದೇಶಕರು, ಚಂದ್ರು ಅವರನ್ನು ಕೆಲಸದಿಂದ ಕಿತ್ತು ಹಾಕುತ್ತಾರೆ.

ಇದು ಅಂದಿನ ಕಥೆ. ಈಗ ಚಂದ್ರು ನಿರ್ದೇಶಕರಾಗಿ, ನಿರ್ಮಾಪಕರಾಗಿ ಬೆಳೆದಿದ್ದಾರೆ. ಈಗ ವಿಜಯ್‌ ಜೊತೆ ಸಿನಿಮಾ ಕೂಡಾ ಮಾಡಿದ್ದಾರೆ. ಅಂದಹಾಗೆ, ಈ ಫ್ಲ್ಯಾಶ್‌ಬ್ಯಾಕ್‌ಗೆ ಕಾರಣವಾಗಿದ್ದು, ಇತ್ತೀಚೆಗೆ ನಡೆದ “ಕನಕ’ ಟ್ರೇಲರ್‌ ಬಿಡುಗಡೆ. ಟ್ರೇಲರ್‌ ಬಿಡುಗಡೆಯಲ್ಲಿ ಕೆ.ಪಿ.ನಂಜುಂಡಿಯವರು ಚಂದ್ರು ಅವರ ಆರಂಭದ ದಿನಗಳನ್ನು ನೆನಪಿಸಿಕೊಂಡರು. ಅಂದು ಆ ಧಾರಾವಾಹಿಯಲ್ಲಿ ಕೆ.ಪಿ.ನಂಜುಂಡಿ ಕೂಡಾ ಪ್ರಮುಖ ಪಾತ್ರ ಮಾಡಿದ್ದರು.

ಚಂದ್ರು ಅವರನ್ನು ನಿರ್ದೇಶಕರು ಕೆಲಸದಿಂದ ತೆಗೆದು ಹಾಕಿದ ವಿಷಯ ಕೇಳಿ ಬೇಸರಗೊಂಡ ನಂಜುಂಡಿ, ಮತ್ತೆ ಅದೇ ಧಾರಾವಾಹಿಯಲ್ಲಿ ಚಂದ್ರು ಅವರಿಗೆ ಕೆಲಸ ಕೊಡಿಸುತ್ತಾರೆ. “ನಾನು ಈ ಧಾರಾವಾಹಿಯಲ್ಲಿ ನಟಿಸಬೇಕಾದರೆ, ಆ ಹುಡುಗ ಇರಬೇಕು’ ಎನ್ನುವ ಮೂಲಕ ಮತ್ತೆ ಅದೇ ಧಾರಾವಾಹಿಯಲ್ಲಿ ಚಂದ್ರು ಮುಂದುವರೆಯುತ್ತಾರೆ. ಹೀಗೆ “ಕನಕ’ ಚಿತ್ರದ ಟ್ರೇಲರ್‌ ಬಿಡುಗಡೆಯ ವೇದಿಕೆ ಆರ್‌.ಚಂದ್ರು ಹಾಗೂ ವಿಜಯ್‌ ಅವರ ಫ್ಲ್ಯಾಶ್‌ಬ್ಯಾಕ್‌ಗೆ ಕಾರಣವಾಯಿತು. 

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.