CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಿತ್ರ ಸಂತೆಯಲ್ಲಿ ಕೃಷ್ಣ ತುಳಸಿ; ಜನರ ಮಧ್ಯೆ ಟೀಸರ್‌ ಬಿಡುಗಡೆ

ಈಗಂತೂ ಚಿತ್ರತಂಡದವರು ತಮ್ಮ ಚಿತ್ರಗಳ ಪ್ರಚಾರ ಕಾರ್ಯಗಳನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತಿರುವುದು ಗೊತ್ತೇ ಇದೆ. ಜನಸಂದಣಿ ಇರುವ ಕಡೆಯೇ ಅಂತಹ ಹೆಚ್ಚೆಚ್ಚು ಕಾರ್ಯಕ್ರಮಗಳು ನಡೆಯುತ್ತವೆ. "ಕೃಷ್ಣ ತುಳಸಿ' ಚಿತ್ರತಂಡ ಕೂಡ ಅದಕ್ಕೆ ಹೊರತಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ "ಚಿತ್ರಸಂತೆ'ಯಲ್ಲಿ ಚಿತ್ರತಂಡ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಪ್ರಚಾರ ಮಾಡಿ ಸಂಭ್ರಮಿಸಿದೆ. 

ಚಿತ್ರಕಲಾ ಪರಿಷತ್‌ ಮುಂದೆ ಸೇರಿದ ಚಿತ್ರತಂಡ, ಅಲ್ಲಿ ಸೇರಿದ್ದ ಸಾವಿರಾರು ಜನರ ಮುಂದೆ ಟೀಸರ್‌ ಬಿಡುಗಡೆ ಮಾಡಿದೆ. ಚಿತ್ರಸಂತೆ ಆಗಿದ್ದರಿಂದ ಅಂದು ಸಿಕ್ಕಾಪಟ್ಟೆ ಜನ ಸೇರಿದ್ದರು. ಅದು ಚಿತ್ರ ಪ್ರಚಾರಕ್ಕೆ ಸರಿಯಾದ ಜಾಗ ಅಂದುಕೊಂಡು ನಿರ್ದೇಶಕ ಸುಖೇಶ್‌ ಅಂಥದ್ದೊಂದು ಐಡಿಯಾ ಮಾಡಿದ್ದರು. ಅಂದು ನಾಯಕ ಸಂಚಾರಿ ವಿಜಯ್‌, ನಾಯಕಿ ಮೇಘಶ್ರೀ ಇತರರು ಅಲ್ಲಿ ಸೇರಿದ್ದ ಜನರ ಸಮ್ಮುಖದಲ್ಲೇ ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದಾರೆ.

"ಕೃಷ್ಣ ತುಳಸಿ' ಚಿತ್ರಕ್ಕೆ ಯೋಗರಾಜ್‌ ಭಟ್‌, ಜಯಂತ್‌ಕಾಯ್ಕಿಣಿ, ಹೃದಯಶಿವ ಗೀತೆಗಳನ್ನು ರಚಿಸಿದ್ದಾರೆ. ಕಿರಣ್‌ ರವೀಂದ್ರನಾಥ್‌ ಸಂಗೀತ ನೀಡಿದ್ದಾರೆ. ನವೀನ್‌. ಎಸ್‌.ಅಕ್ಷಿ ಛಾಯಾಗ್ರಾಹಕರು. ನಿರ್ಮಾಪಕ ಎಂ.ನಾರಾಯಣಸ್ವಾಮಿ ಅವರಿಗೆ ಇದು ಮೊದಲ ಅನುಭವ.

Back to Top