CONNECT WITH US  
echo "sudina logo";

ದಂಡುಪಾಳ್ಯ ಭಾಗ-4 ಬರುತ್ತಾ?

ಹೀಗೊಂದು ಸುದ್ದಿ ಜೋರಾಗಿದೆ

ಶ್ರೀನಿವಾಸ್‌ರಾಜು ನಿರ್ದೇಶನದಲ್ಲಿ "ದಂಡುಪಾಳ್ಯ' ಬಂತು. ಅದು ಸಿಕ್ಕಾಪಟ್ಟೆ ಸದ್ದು ಮಾಡು¤. ಆ ಬಳಿಕ "ಭಾಗ-2' ಬಂತು. ಅದೂ ಸುದ್ದಿಯಾಯ್ತು. ಈಗ 'ಭಾಗ-3' ಬರೋಕೆ ರೆಡಿಯಾಗಿದೆ. ಅದಾದ ಮೇಲೂ "ಭಾಗ-4' ಬರುತ್ತಾ? ಈಗ ಇದೇ ವಿಷಯ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ತೆರೆಗೆ ಬರಲು "ಭಾಗ 3' ರೆಡಿಯಾಗಿದ್ದು, ಇಷ್ಟರಲ್ಲೇ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ.

ಹೊಸ ಸುದ್ದಿ ಅಂದರೆ, "ಭಾಗ 4' ಚಿತ್ರ ಕೂಡ ಬರಲಿದೆ ಎಂಬ ಸುದ್ದಿ ಜೋರಾಗಿದೆ. ಈಗಾಗಲೇ ಆ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ ಎನ್ನಲಾಗಿದೆ. ಬಿಡುಗಡೆಯಾಗಿರುವ ಚಿತ್ರಗಳಿಗೆ ಶ್ರೀನಿವಾಸ್‌ರಾಜು ನಿರ್ದೇಶನ ಮಾಡಿದ್ದರು. ಬಿಡುಗಡೆಗೆ ರೆಡಿಯಾಗಿರುವ "ಭಾಗ-3' ಚಿತ್ರಕ್ಕೂ ಅವರದೇ ನಿರ್ದೇಶನವಿದೆ. ಆದರೆ, ಸೆಟ್ಟೇರಲಿದೆ ಎಂದು ಹೇಳಲಾಗುತ್ತಿರುವ "ಭಾಗ-4' ಚಿತ್ರಕ್ಕೆ ನಿರ್ದೇಶಕರು ಯಾರಾಗುತ್ತಾರೆ ಎಂಬುದು ಪ್ರಶ್ನೆ.

ಒಂದಂತೂ ಹೌದು, "ದಂಡುಪಾಳ್ಯ' ಮೂರನೇ ಭಾಗದಲ್ಲಿ ಬರುತ್ತಿದೆ. "ಭಾಗ 4' ರ ಬಗ್ಗೆ ಆ ನಿರ್ದೇಶಕರು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಚಿತ್ರಕ್ಕೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಅದೇನೆ ಇದ್ದರೂ, ಚಿತ್ರ ಸೆಟ್ಟೇರಿದ ಬಳಿಕವಷ್ಟೇ ಎಲ್ಲಾ ಅಂತೆಕಂತೆಗಳಿಗೆ ತೆರೆಬೀಳಲಿದೆ. ಅಂದಹಾಗೆ, "ಭಾಗ 4' ರಲ್ಲಿ ಬೇರೆ ಯಾವ್ಯಾವ ನಟ,ನಟಿಯರು ಬದಲಾಗುತ್ತಾರೆ, ಸೇರಿಕೊಳ್ಳುತ್ತಾರೆ ಎಂಬುದಕ್ಕೂ ಸದ್ಯಕ್ಕೆ ಉತ್ತರವಿಲ್ಲ.

Trending videos

Back to Top