CONNECT WITH US  

ಅಭಿಮಾನಿಗಳ ಸಮ್ಮುಖದಲ್ಲಿ ದುನಿಯಾ ವಿಜಯ್‌ ಹುಟ್ಟುಹಬ್ಬ

"ದುನಿಯಾ' ವಿಜಯ್‌ ಶನಿವಾರ ಅಭಿಮಾನಿಗಳೊಂದಿಗೆ ತಮ್ಮ 44 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಶುಕ್ರವಾರ ಮಧ್ಯರಾತ್ರಿಯೇ ಅಭಿಮಾನಿಗಳು ಅವರ ಮನೆಯ ಮುಂದೆ ಜಮಾಯಿಸಿ, ಜೈಕಾರ ಹಾಕುವ ಮೂಲಕ ಅವರೊಂದಿಗೆ ಹುಟ್ಟುಹಬ್ಬ ಆಚರಿಸಿ, ಕೇಕ್‌ ಕತ್ತರಿಸಿ ಸಂಭ್ರಮಿಸಿದರು.

ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೂ ಮುನ್ನ ಬನಶಂಕರಿಯಲ್ಲಿರುವ ಸ್ಮಶಾನಕ್ಕೆ ಭೇಟಿ ನೀಡಿದ ವಿಜಯ್‌, ಅನಿಲ್‌ ಹಾಗು ಉದಯ್‌ ಸಮಾಧಿ ಬಳಿ ಹೋಗಿ ನಮನ ಸಲ್ಲಿಸಿದರು. ಮನೆಯ ಮುಂದೆ ಸಾಲುಗಟ್ಟಿದ ಅಭಿಮಾನಿಗಳ ಜೊತೆಗೆ ಕೆಲ ಹೊತ್ತು ಮಾತನಾಡಿ, ಅವರ ಶುಭಾಶಯಗಳನ್ನು ಸ್ವೀಕರಿಸಿದರು.

ಪ್ರೀತಂ ಗುಬ್ಬಿ ನಿರ್ದೇಶನದ "ಜಾನಿ ಜಾನಿ ಯೆಸ್‌ ಪಪ್ಪಾ' ಚಿತ್ರತಂಡ, ವಿಜಯ್‌ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಬರ್ತ್‌ಡೆ ಗಿಫ್ಟ್ ನೀಡಿದೆ. ಇನ್ನು, ವಿಜಯ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ "ಕುಸ್ತಿ' ಚಿತ್ರದ ಮೊದಲ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ತಮ್ಮ ಪುತ್ರ ಸಾಮ್ರಾಟ್‌ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ಹುಟ್ಟಹಬ್ಬದ ದಿನದಂದು ಚಿತ್ರರಂಗದ ಅನೇಕ ನಿರ್ದೇಶಕ, ನಿಮಾರಪಕರು, ಕಲಾವಿದರು ವಿಜಯ್‌ ಮನೆಗೆ ತೆರಳಿ ಶುಭಾಶಯ ಹೇಳಿದ್ದಾರೆ. ವಿಜಯ್‌ ಕೂಡ ತಮ್ಮ ಕುಟುಂಬ ವರ್ಗದೊಂದಿಗೆ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

Trending videos

Back to Top