ಮುಂದಿನ ತಿಂಗಳು ಭೂತಯ್ಯನ ಮೊಮ್ಮಗ ಅಯ್ಯು
Team Udayavani, Jan 24, 2018, 11:04 AM IST
ಅರಸು ನಾಗರಾಜ್ ಫಿಲಂಸ್ ಲಾಂಛನದಲ್ಲಿ, ಆರ್. ವರಪ್ರಸಾದ್ ಶೆಟ್ಟಿ, ರವಿಶಂಕರ್, ಅನಿಲ್, ಕೂಡಿ ನಿರ್ಮಿಸಿರುವ “ಭೂತಯ್ಯನ ಮೊಮ್ಮಗ ಅಯ್ಯು’ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರವನ್ನು ನಾಗರಾಜ್ ಪೀಣ್ಯ ನಿರ್ದೇಶಿಸಿದ್ದಾರೆ.
ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಾಹಕ, ಶ್ರೀನಿವಾಸ್ ಬಾಬು ಸಂಕಲನವಿದೆ. ತಾರಾಗಣದಲ್ಲಿ ಚಿಕ್ಕಣ್ಣ, ಶ್ರುತಿ ಹರಿಹರನ್, ತಬಲಾ ನಾಣಿ, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ರಾಕ್ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ, ಸಿದ್ದಿ, ಕೀರ್ತಿರಾಜ್, ಮೋಹನ್ ಜುನೇಜಾ, ಉಮೇಶ್, ಮನ್ದೀಪ್ ರಾಯ್, ವರ್ಧನ್ ಮುಂತಾದವರಿದ್ದಾರೆ.