CONNECT WITH US  

ಕೊನೆಗೂ ವಿಜಯ್‌ ಬಂದ್ರು!

ಸದ್ಯದಲ್ಲೇ ಕನಕ ನೋಡಲಿರುವ ಪುನೀತ್‌

ಆರ್‌.ಚಂದ್ರು ನಿರ್ಮಾಣ-ನಿರ್ದೇಶನದ "ಕನಕ' ಚಿತ್ರದ ಬಿಡುಗಡೆ ಮುಂಚಿನ ಪತ್ರಿಕಾಗೋಷ್ಠಿಗೆ ನಾಯಕ ನಟ "ದುನಿಯಾ' ವಿಜಯ್‌ ಬಂದಿರಲಿಲ್ಲ. ಹಾಗೆಯೇ ಚಿತ್ರದ ಪ್ರಮೋಷನ್‌ನಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ವಿಜಯ್‌ ಅವರ ಅನುಪಸ್ಥಿತಿ ಹಲವು ಊಹಾಪೋಹಗಳಿಗೆ ಕಾರಣ ಮಾಡಿಕೊಟ್ಟಿತ್ತು. ಚಂದ್ರು-ವಿಜಿ ಏನಾದರೂ ಮುನಿಸಿಕೊಂಡಿದ್ದಾರಾ ಎಂಬಂತಹ ಪ್ರಶ್ನೆಗಳು ಎದ್ದಿದ್ದವು.

ವಿಜಯ್‌ ಅಂದು ಮುತ್ತತ್ತಿ ಕಾಡಿಗೆ ಹೋಗಿದ್ದರಿಂದ ಬಂದಿರಲಿಲ್ಲ ಎಂಬ ಉತ್ತರ ಚಿತ್ರತಂಡದಿಂದ ಬಂದಿತ್ತು. ಆದರೂ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ವಿಜಯ್‌ ಮಿಸ್‌ ಆಗಿದ್ದು ಸುದ್ದಿಗೆ ಗ್ರಾಸವಾಗಿತ್ತು. ಈಗ "ಕನಕ' ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ನಿರ್ದೇಶಕ ಚಂದ್ರು ಹಾಗೂ ವಿಜಯ್‌ ಖುಷಿಯಾಗಿದ್ದಾರೆ. ಈ ಖುಷಿಯಲ್ಲಿಯೇ ವಿಜಯ್‌ ತಮ್ಮ ಕುಟುಂಬ ಸಮೇತ ಭಾನುವಾರ ಸಿನಿಮಾ ನೋಡಿದ್ದಾರೆ.

ಕೆ.ಜಿ.ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ವಿಜಯ್‌ ಕುಟುಂಬ, ನಿರ್ದೇಶಕ ಚಂದ್ರು ಸೇರಿದಂತೆ ಚಿತ್ರತಂಡ ಜೊತೆಯಾಗಿ ಸಿನಿಮಾ ನೋಡಿದೆ. "ಕನಕನಿಗೆ ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಮಾಸ್‌-ಕ್ಲಾಸ್‌ ಪ್ರೇಕ್ಷಕಕರು ಇಷ್ಟಪಡುತ್ತಿದ್ದಾರೆ' ಎಂದು ಖುಷಿಯಿಂದ ಹೇಳುತ್ತಾರೆ ಚಂದ್ರು.

ಮುಂದೆ ಪುನೀತ್‌ ಸರದಿ: "ಕನಕ' ಚಿತ್ರವನ್ನು ವಿಜಯ್‌ ಮತ್ತು ತಂಡದ ಇತರೆ ಸದಸ್ಯರು ನೋಡಿದ್ದಾಗಿದೆ. ಈ ಮಧ್ಯೆ ಚಂದ್ರು ಮತ್ತು ವಿಜಯ್‌ ಇಬ್ಬರೂ ಪುನೀತ್‌ ರಾಜಕುಮಾರ್‌ ಅವರನ್ನು ಭೇಟಿ ಮಾಡಿ, ಚಿತ್ರ ನೋಡುವಂತೆ ಆಹ್ವಾನಿಸಿದ್ದಾರೆ. ವಿಜಯ್‌, ಚಂದ್ರು ಅವರ ಆಹ್ವಾನವನ್ನು ಒಪ್ಪಿರುವ ಪುನೀತ್‌, ಸದ್ಯದಲ್ಲೇ ಚಿತ್ರ ನೋಡುವುದಾಗಿ ಆಶ್ವಾಸನೆ ನೀಡಿದ್ದಾರೆ.


Trending videos

Back to Top