CONNECT WITH US  

ಪುಟ್ಟಗೌರಿಯ ಇನ್ನೊಂದು ಸಿನಿಮಾ

ಟಕ್ಕರ್‌ಗೆ ರಂಜನಿ ರಾಘವನ್‌ ನಾಯಕಿ

ವಿನಯ್‌ ರಾಜಕುಮಾರ್‌ ಅಭಿನಯದ "ರನ್‌ ಅಂಟೋನಿ' ಚಿತ್ರ ನಿರ್ದೇಶಿಸಿದ ರಘು ಶಾಸ್ತ್ರಿ "ಟಕ್ಕರ್‌' ಎಂಬ ಸಿನಿಮಾ ಮಾಡುತ್ತಿರುವ ಸುದ್ದಿಯನ್ನು ನೀವು ಇದೇ ಬಾಲ್ಕನಿಯಲ್ಲಿ ಓದಿದ್ದೀರಿ. ಆಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರಕ್ಕೆ ನಾಯಕಿ ಸಿಕ್ಕಾಗಿದೆ. ರಂಜನಿ ರಾಘವನ್‌ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಯಾವ ರಂಜನಿ ಎಂದು ನೀವು ಕೇಳಿದರೆ ಮೊದಲು "ಪುಟ್ಟಗೌರಿ' ಧಾರಾವಾಹಿ ಬಗ್ಗೆ ಹೇಳಬೇಕು. ಆ ಧಾರಾವಾಹಿ ಮೂಲಕ ಬೆಳಕಿಗೆ ಬಂದ ರಂಜನಿ ಆ ನಂತರ "ರಾಜಹಂಸ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಚಿತ್ರ ಕಳೆದ ವರ್ಷ ತೆರೆಕಂಡಿತ್ತು. ಆ ಚಿತ್ರದಲ್ಲಿನ ರಂಜನಿ ನಟನೆಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಅವಕಾಶಗಳು ಕೂಡಾ ಬರತೊಡಗಿವೆ. ಅದರ ಪರಿಣಾಮವೇ "ಟಕ್ಕರ್‌'.

ಈ ಚಿತ್ರದಲ್ಲಿ ರಂಜನಿ ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರ ಸಿಕ್ಕಿದೆಯಂತೆ. ಇದಲ್ಲದೇ ರಂಜನಿ ರಾಘವನ್‌ "ಸೂಫಿ' ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇಲ್ಲಿ ರಂಜನಿ ಅವರು ಟೈಟಲ್‌ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದು ವಿಶೇಷ. ಇಡೀ ಚಿತ್ರದ ಕಥೆ ಕೂಡ ಅವರ ಸುತ್ತವೇ ಸಾಗಲಿದೆ. ಇನ್ನು, ಈ ಚಿತ್ರಕ್ಕೆ ಶಿವು ಜಮಖಂಡಿ ನಿರ್ದೇಶಕರು.

ವಿಜಯ್‌ ರಾಘವೇಂದ್ರ ಅಭಿನಯದ "ನನ್ನ ನಿನ್ನ ಪ್ರೇಮಕಥೆ' ಬಳಿಕ ಶಿವು ಜಮಖಂಡಿ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರಕ್ಕೆ  ವಿನೋದ್‌ ಪಾಟೀಲ್‌ ಹೀರೋ. ನಟ ದರ್ಶನ್‌ ಅವರ ಸಂಬಂಧಿಯಾಗಿರುವ ಮನೋಜ್‌ ಈಗ "ಟಕ್ಕರ್‌' ಮೂಲಕ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ಈ ಚಿತ್ರವನ್ನು ನಾಗೇಶ್‌ ಕೋಗಿಲು ನಿರ್ಮಿಸುತ್ತಿದ್ದಾರೆ. ಈ ಹಿಂದೆ  ಇವರು "ಹುಲಿರಾಯ' ಚಿತ್ರವನ್ನು ನಿರ್ಮಿಸಿದ್ದರು.

"ರನ್‌ ಅಂಟೋನಿ' ಮೂಲಕ ಎಂಟ್ರಿಕೊಟ್ಟ ರಘು ಶಾಸ್ತ್ರಿ ಈಗ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಮಾಡಲು ಹೊರಟಂತಿದೆ. "ಲೈಫ್ ಜೊತೆಗೊಂದ್‌ ಸೆಲ್ಫಿ' ಚಿತ್ರದಲ್ಲೂ ರಘು ಶಾಸ್ತ್ರಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಫೋಟೋಶೂಟ್‌ ಕೂಡಾ ಆಗಿದೆ. ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ನೋಡಿದಾಗ ಇದು ಪಕ್ಕಾ ಆ್ಯಕ್ಷನ್‌ ಸಿನಿಮಾವೆಂಬುದು ಗೊತ್ತಾಗುತ್ತದೆ. 


Trending videos

Back to Top