ರಾಜುವಿಗೆ 25ರ ಸಂಭ್ರಮ | Udayavani - ಉದಯವಾಣಿ
   CONNECT WITH US  
echo "sudina logo";

ರಾಜುವಿಗೆ 25ರ ಸಂಭ್ರಮ

ಕಳೆದ ತಿಂಗಳು ಬಿಡುಗಡೆಯಾದ "ರಾಜು ಕನ್ನಡ ಮೀಡಿಯಂ' ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಚಿತ್ರತಂಡದ ಮೊಗದಲ್ಲಿ ನಗು ಮೂಡಿತ್ತು. ಅದರ ಪರಿಣಾಮವಾಗಿ ಈಗ ಚಿತ್ರ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಖುಷಿಯನ್ನು ಚಿತ್ರತಂಡ ಭಾನುವಾರ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರ ಜೊತೆ ಕೇಕ್‌ ಕತ್ತರಿಸುವ ಮೂಲಕ ಆಚರಿಸಿತು. 

ಹೌದು, "ರಾಜು ಕನ್ನಡ ಮೀಡಿಯಂ' ಚಿತ್ರದ ನಾಯಕ ಗುರುನಂದನ್‌, ನಿರ್ಮಾಪಕ ಕೆ.ಎ. ಸುರೇಶ್‌ ಸೇರಿದಂತೆ ಚಿತ್ರತಂಡ ಸಂತೋಷ್‌ ಚಿತ್ರಮಂದಿರಕ್ಕೆ ಭೇಟಿ ಕೊಟ್ಟು ಪ್ರೇಕ್ಷಕರರೊಂದಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿತು. "ಜನ ಸಿನಿಮಾ ನೋಡಿ ಖುಷಿಪಡುತ್ತಿದ್ದಾರೆ. ಪಕ್ಕಾ ಕನ್ನಡ ನೇಟಿವಿಟಿ ಇರುವ ಸಿನಿಮಾ ಎಂಬ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸುದೀಪ್‌ ಅವರ ಪಾತ್ರ, ಅವರ ಗೆಟಪ್‌ ಅನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಚಿತ್ರ ಈಗಾಗಲೇ ವಿದೇಶಗಳಲ್ಲೂ ಬಿಡುಗಡೆಯಾಗಿದ್ದು, ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ' ಎನ್ನುವುದು ನಿರ್ಮಾಪಕ ಕೆ.ಎ.ಸುರೇಶ್‌ ಮಾತು. "ರಾಜು ಕನ್ನಡ ಮೀಡಿಯಂ' ಚಿತ್ರವನ್ನು ನರೇಶ್‌ ನಿರ್ದೇಶಿಸಿದ್ದು, ಚಿತ್ರದಲ್ಲಿ ಆವಂತಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. 

Trending videos

Back to Top