ಅಭಿಷೇಕ್‌ ಈಗ ಅಮರ್‌


Team Udayavani, Feb 13, 2018, 9:30 PM IST

ambi-son.jpg

ಅಂಬರೀಶ್‌ ಪುತ್ರ ಅಭಿಷೇಕ್‌ ಹೀರೋ ಆಗಿ ಲಾಂಚ್‌ ಆಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಅಭಿಷೇಕ್‌ ಹೀರೋ ಆಗುತ್ತಾರೆಂಬುದು ಪಕ್ಕಾ ಆದ ದಿನದಿಂದಲೇ ಅವರ ಸಿನಿಮಾಕ್ಕೆ ಯಾವ ಟೈಟಲ್‌ ಇಡಬಹುದೆಂಬ ಚರ್ಚೆ, ಸುದ್ದಿಗಳು ಓಡಾಡುತ್ತಲೇ ಇವೆ. ಆರಂಭದಲ್ಲಿ ಚಿತ್ರಕ್ಕೆ “ಜಲೀಲ’ ಎಂದು ಟೈಟಲ್‌ ಇಡಲಾಗುತ್ತದೆ ಎಂಬ ಸುದ್ದಿ ಓಡಾಡುತ್ತಿತ್ತು. “ನಾಗರಹಾವು’ ಚಿತ್ರದಲ್ಲಿ ಅಂಬರೀಶ್‌ ಅವರ ಪಾತ್ರದ ಹೆಸರಿದು.

ಆದರೆ, “ಜಲೀಲ’ ಎಂಬ ಹೆಸರಿನಲ್ಲಿ ಈಗಾಗಲೇ ಹೊಸಬರ ಸಿನಿಮಾವೊಂದು ಆರಂಭವಾಗಿದೆ. ಅದರ ಬೆನ್ನಲ್ಲೇ “ತಿರುಗುಬಾಣ’ ಎಂಬ ಶೀರ್ಷಿಕೆ ಇಡುತ್ತಾರೆ ಎಂಬ ಸುದ್ದಿಯೂ ಇತ್ತು. ಇದು ಕೂಡಾ ಅಂಬರೀಶ್‌ ಅವರ ಸಿನಿಮಾ. ಈಗ ಮತ್ತೂಂದು ಟೈಟಲ್‌ ಜೋರಾಗಿ ಕೇಳಿಬರುತ್ತಿದೆ ಮತ್ತು ಬಹುತೇಕ ಅದು ಅಂತಿಮವಾಗುವ ಸಾಧ್ಯತೆಯೂ ಇದೆ. ಅದು “ಅಮರ್‌’.

ಇದು ಅಭಿಷೇಕ್‌ ಅವರ ಮೊದಲ ಚಿತ್ರಕ್ಕೆ ಇಟ್ಟಿದ್ದಾರೆನ್ನಲಾದ ಟೈಟಲ್‌. ಅಮರ್‌ ಟೈಟಲ್‌ಗ‌ೂ ಅಂಬರೀಶ್‌ ಅವರಿಗೂ ಒಂದು ಸಂಬಂಧವಿದೆ ಎಂದರೆ ತಪ್ಪಲ್ಲ. ಮೊದಲನೇಯದಾಗಿ ಅಂಬರೀಶ್‌ ಅವರ ಮೂಲ ಹೆಸರು ಅಮರ್‌ನಾಥ್‌. ಇದು ಒಂದು ಅಂಶವಾದರೆ ಸಿನಿಮಾ ವಿಷಯದಲ್ಲೂ ಅಮರ್‌ಗೂ ಅಂಬರೀಶ್‌ ಅವರಿಗೂ ತುಂಬಾನೇ ನಂಟಿದೆ.

“ಹಾಂಕಾಂಗ್‌ನಲ್ಲಿ ಏಜೆಂಟ್‌ ಅಮರ್‌’ ಹಾಗೂ “ಅಮರನಾಥ್‌’ ಎಂಬ ಸಿನಿಮಾಗಳಲ್ಲೂ ಅಂಬರೀಶ್‌ ನಟಿಸಿದ್ದಾರೆ. ಇದರ ಹೊರತಾಗಿಯೂ ಅಮರನಾಥ್‌ ಎಂಬ ಪಾತ್ರಗಳಲ್ಲೂ ಅಂಬರೀಶ್‌ ಕಾಣಿಸಿಕೊಂಡಿದ್ದರು. “ಚಕ್ರವ್ಯೂಹ’ ಹಾಗೂ “ಬುಲ್‌ಬುಲ್‌’ ಚಿತ್ರಗಳಲ್ಲಿ ಅಂಬರೀಶ್‌ ಅವರ ಪಾತ್ರದ ಹೆಸರು ಕೂಡಾ ಅಮರನಾಥ್‌.

ಹೀಗೆ ಅಮರ್‌ ಹೆಸರಿಗೂ ಅಂಬರೀಶ್‌ ಅವರಿಗೂ ಅವಿನಾಭಾವ ಸಂಬಂಧವಿದೆ ಎನ್ನಬಹುದು. ಈಗ ಅವರ ಮಗನ ಮೊದಲ ಚಿತ್ರಕ್ಕೂ “ಅಮರ್‌’ ಎಂದು ಟೈಟಲ್‌ ಇಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಚಿತ್ರವನ್ನು ಚೇತನ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ಸಂದೇಶ್‌ ನಾಗರಾಜ್‌ ಈ ಚಿತ್ರದ ನಿರ್ಮಾಪಕರು. ಈ ತಿಂಗಳಾಂತ್ಯ ಅಥವಾ ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. 

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.