CONNECT WITH US  

ಚಿಕಾಗೋದಲ್ಲಿ ಕಿಸ್‌ ಫ‌ಸ್ಟ್‌ಲುಕ್‌ ಬಿಡುಗಡೆ

ನಿರ್ದೇಶಕ ಎ.ಪಿ.ಅರ್ಜುನ್‌ "ಕಿಸ್‌' ಎಂಬ ಸಿನಿಮಾ ಆರಂಭಿಸಿದ್ದು ನಿಮಗೆ ಗೊತ್ತೇ ಇದೆ. ಈಗ ಬಹುತೇಕ ಚಿತ್ರೀಕರಣ ಮುಗಿದಿದೆ. ಇಂದು ಪ್ರೇಮಿಗಳ ದಿನವಾದ್ದರಿಂದ ಚಿತ್ರತಂಡ ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಲಿದೆ. ಅದು ದೂರದ ಚಿಕಾಗೋದಲ್ಲಿ. ಚಿಕಾಗೋದಲ್ಲಿ ರಿಲೀಸ್‌ ಮಾಡಲು ಕಾರಣವೇನೆಂದು ನೀವು ಕೇಳಬಹುದು. ಫ‌ಸ್ಟ್‌ಲುಕ್‌ ಬಿಡುಗಡೆ ಮಾಡುತ್ತಿರೋದು ಯಶ್‌ ಹಾಗೂ ರಾಧಿಕಾ ಪಂಡಿತ್‌. ಸದ್ಯ ಇವರಿಬ್ಬರು ಅಮೆರಿಕಾದ ಚಿಕಾಗೋದಲ್ಲಿದ್ದಾರೆ. ರಾಧಿಕಾ ಅವರ ಸಹೋದರ ಚಿಕಾಗೋದಲ್ಲಿದ್ದು, ಆ ಕಾರಣದಿಂದ ಈ ಜೋಡಿ ಕೂಡಾ ಚಿಕಾಗೋಗೆ ತೆರಳಿದೆ. ಹಾಗಾಗಿ, "ಕಿಸ್‌' ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಅಲ್ಲಿಂದಲೇ ಬಿಡುಗಡೆ ಮಾಡಲಿದ್ದಾರೆ.

ಈ ಚಿತ್ರದಲ್ಲಿ ವಿರಾಟ್‌ ಹಾಗೂ ಶ್ರೀಲೀಲಾ ನಾಯಕ-ನಾಯಕಿ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಈ ಚಿತ್ರವನ್ನು ವಿ.ರವಿಕುಮಾರ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. 
 

Trending videos

Back to Top