ಚಿಕಾಗೋದಲ್ಲಿ ಕಿಸ್ ಫಸ್ಟ್ಲುಕ್ ಬಿಡುಗಡೆ
Team Udayavani, Feb 14, 2018, 2:25 PM IST
ನಿರ್ದೇಶಕ ಎ.ಪಿ.ಅರ್ಜುನ್ “ಕಿಸ್’ ಎಂಬ ಸಿನಿಮಾ ಆರಂಭಿಸಿದ್ದು ನಿಮಗೆ ಗೊತ್ತೇ ಇದೆ. ಈಗ ಬಹುತೇಕ ಚಿತ್ರೀಕರಣ ಮುಗಿದಿದೆ. ಇಂದು ಪ್ರೇಮಿಗಳ ದಿನವಾದ್ದರಿಂದ ಚಿತ್ರತಂಡ ಚಿತ್ರದ ಫಸ್ಟ್ಲುಕ್ ರಿಲೀಸ್ ಮಾಡಲಿದೆ. ಅದು ದೂರದ ಚಿಕಾಗೋದಲ್ಲಿ. ಚಿಕಾಗೋದಲ್ಲಿ ರಿಲೀಸ್ ಮಾಡಲು ಕಾರಣವೇನೆಂದು ನೀವು ಕೇಳಬಹುದು. ಫಸ್ಟ್ಲುಕ್ ಬಿಡುಗಡೆ ಮಾಡುತ್ತಿರೋದು ಯಶ್ ಹಾಗೂ ರಾಧಿಕಾ ಪಂಡಿತ್. ಸದ್ಯ ಇವರಿಬ್ಬರು ಅಮೆರಿಕಾದ ಚಿಕಾಗೋದಲ್ಲಿದ್ದಾರೆ. ರಾಧಿಕಾ ಅವರ ಸಹೋದರ ಚಿಕಾಗೋದಲ್ಲಿದ್ದು, ಆ ಕಾರಣದಿಂದ ಈ ಜೋಡಿ ಕೂಡಾ ಚಿಕಾಗೋಗೆ ತೆರಳಿದೆ. ಹಾಗಾಗಿ, “ಕಿಸ್’ ಚಿತ್ರದ ಫಸ್ಟ್ಲುಕ್ ಅನ್ನು ಅಲ್ಲಿಂದಲೇ ಬಿಡುಗಡೆ ಮಾಡಲಿದ್ದಾರೆ.
ಈ ಚಿತ್ರದಲ್ಲಿ ವಿರಾಟ್ ಹಾಗೂ ಶ್ರೀಲೀಲಾ ನಾಯಕ-ನಾಯಕಿ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಈ ಚಿತ್ರವನ್ನು ವಿ.ರವಿಕುಮಾರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ