CONNECT WITH US  

"ಉಡುಂಬಾ' ಚಿತ್ರಕ್ಕೆ "ಯು/ಎ' ಪ್ರಮಾಣ ಪತ್ರ

"ಉಡುಂಬಾ' ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ ಎ ಪ್ರಮಾಣ ಪತ್ರ ನೀಡಿದೆ. ಶಿವರಾಜ್‌ ನಿರ್ದೇಶನದ ಈ ಚಿತ್ರ, ಕಡಲ ತೀರದ ಯುವಕ, ಮೀನು ಮಾರುವವನ ಕಥೆ ಹೊಂದಿದೆ. ಹನುಮಂತ ರಾವ್‌, ವೆಂಕಟ್‌ ರೆಡ್ಡಿ ಹಾಗೂ ಮಹೇಶ್‌ ಕುಮಾರ್‌ ಈ ಚಿತ್ರದ ನಿರ್ಮಾಪಕರು.

35 ದಿನಗಳ ಕಾಲ ಉಡುಪಿ, ಮಂಗಳೂರು, ಗೋಕರ್ಣ, ರಾಮನಗರ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ನಾಯಕ ಪವನ್‌ ಸೂರ್ಯ ಈ ಚಿತ್ರಕ್ಕೆ "ಸಿಕ್ಸ್‌ ಪ್ಯಾಕ್‌' ಮಾಡಿದ್ದಾರೆ. ಚಿರಶ್ರೀ ಚಿತ್ರದ ನಾಯಕಿ. ಇರ್ಫಾನ್‌ ಖಳ ನಾಯಕ, ಶರತ್‌ ಲೋಹಿತಾಶ್ವ, ವಿನೀತ್‌ ರಾಜ್‌ ಸಂಗೀತ, ಹಾಲೇಶ್‌ ಛಾಯಾಗ್ರಹಣ, ಧನ್‌ ಕುಮಾರ್‌ ನೃತ್ಯ ನಿರ್ದೇಶನ, ಎಸ್‌ ಬಿ ಉದವ್‌ ಸಂಕಲನ ಈ ಚಿತ್ರಕ್ಕೆ ಒದಗಿಸಿದ್ದಾರೆ.


Trending videos

Back to Top