CONNECT WITH US  

"777 ಚಾರ್ಲಿ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಹೀರೋ

ರಕ್ಷಿತ್ ಶೆಟ್ಟಿ ಸದ್ಯದಲ್ಲೇ "777 ಚಾರ್ಲಿ' ಎಂಬ ಚಿತ್ರವನ್ನು ನಟಿಸುತ್ತಿರುವ ಸುದ್ದಿ ಗೊತ್ತಿರಬಹುದು. ಆ ಚಿತ್ರದಲ್ಲಿ ಅರವಿಂದ್ ಅಯ್ಯರ್ ನಾಯಕರಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಈಗ ಚಿತ್ರದ ನಾಯಕ ಬದಲಾಗಿದ್ದು, ಅವರ ಬದಲು ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, "777 ಚಾರ್ಲಿ' ಚಿತ್ರಕ್ಕೆ ಈ ಮೊದಲು ಅರವಿಂದ್ ಅಯ್ಯರ್ ನಾಯಕರಾಗಿ ಆಯ್ಕೆಯಾಗಿದ್ದರು. ಆ ಚಿತ್ರದ ಫೋಟೋ ಶೂಟ್ ಬೇರೆ ಆಗಿತ್ತು. ಈಗ ಅರವಿಂದ್ ಬದಲಾಗಿದ್ದು, ಅವರ ಬದಲು ರಕ್ಷಿತ್ ಶೆಟ್ಟಿ ನಾಯಕನಾಗಿ ಅಭಿನಯಿಸಲಿದ್ದಾರೆ. ಅಷ್ಟಕ್ಕೂ ಅರವಿಂದ್ ಬದಲಾಗಲು ಕಾರಣವೇನು ಎಂದರೆ ಅವರ ಡೇಟ್ಸ್ ಎಂಬ ಉತ್ತರ ಬರುತ್ತದೆ.

ಅರವಿಂದ್ ಈಗಾಗಲೇ ರಕ್ಷಿತ್ ಮತ್ತೊಂದು ಚಿತ್ರ "ಭೀಮಸೇನಾ ನಳಮಹಾರಾಜ'ದಲ್ಲಿ ಅರವಿಂದ್ ನಟಿಸುತ್ತಿರುವುದರಿಂದ, ಎರಡೆರೆಡು ಚಿತ್ರಗಳಲ್ಲಿ ನಟಿಸುವುದಕ್ಕೆ ಕಷ್ಟವಾಗುತ್ತಿದೆ. ಆ ಕಾರಣದಿಂದ ಅವರು ಬದಲಾಗಿದ್ದಾರೆ. ಮೇನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರವನ್ನು ಕಿರಣ್ ರಾಜ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ.

ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡುತ್ತಿದ್ದಾರೆ ಕಿರಣ್ ರಾಜ್. ಇದೊಂದು ಮನುಷ್ಯ ಹಾಗೂ ಪ್ರಾಣಿಯ ಬಾಂಧವ್ಯದ ಸುತ್ತ ನಡೆಯುವ ಸಿನಿಮಾ ಅಂತೆ. ಬೇಸರದಲ್ಲಿರುವ ನಾಯಕನಿಗೆ ಬೀದಿ ನಾಯಿಯೊಂದು ಸಿಗುತ್ತದೆ. ಅದು ಅವನ ಲೈಫ್‍ಗೆ ಎಂಟ್ರಿಕೊಟ್ಟ ತಕ್ಷಣ ಆತ ಹೇಗೆ ಬದಲಾಗುತ್ತಾನೆ ಎನ್ನುವುದು ಚಿತ್ರದ ಕಥೆ. ಈ ಚಿತ್ರಕ್ಕೆ ನಾಬಿನ್ ಸಂಗೀತ, ಅರುಣ್ ಕಶ್ಯಪ್ ಛಾಯಾಗ್ರಹಣವಿದೆ.


Trending videos

Back to Top