CONNECT WITH US  
echo "sudina logo";

ಟಗರುಗೆ ಯಶ್‌ ಮೆಚ್ಚುಗೆ

ಶಿವರಾಜಕುಮಾರ್‌ ಅಭಿನಯದ "ಟಗರು' ಚಿತ್ರವನ್ನು ಕೆಲ ದಿನಗಳ ಹಿಂದೆ ನಟ ಸುದೀಪ್‌ ಅವರು ನೋಡಿ ಮೆಚ್ಚಿಕೊಂಡಿದ್ದರು. ಸೂರಿಯ ಹೊಸ ಬಗೆಯ ನಿರೂಪಣೆ, ಶಿವರಾಜಕುಮಾರ್‌ ಅವರ ನಟನೆ, ಚಿತ್ರದಲ್ಲಿ ಬರುವ ವಿಭಿನ್ನ ಪಾತ್ರಗಳನ್ನು ಶ್ಲಾಘಿಸಿದ್ದರು. ಈಗ ಮತ್ತೂಬ್ಬ ನಟನ ಸರದಿ. ಹೌದು, "ಟಗರು' ಚಿತ್ರವನ್ನು ನಟ ಯಶ್‌ ಶನಿವಾರ ನೋಡಿದ್ದಾರೆ.

ಒರಾಯನ್‌ ಮಾಲ್‌ನಲ್ಲಿ "ಟಗರು' ಚಿತ್ರವನ್ನು ಯಶ್‌ ವೀಕ್ಷಿಸಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಸಿನಿಮಾ ಕಥೆ, ನಿರೂಪಣೆ ವಿಭಿನ್ನವಾಗಿದೆ. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯಬೇಕು. ಆ ತರಹದ ಒಂದು ವಿಭಿನ್ನ ಸ್ಕ್ರಿಪ್ಟ್. ಸೂರಿಯವರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಪ್ರತಿ ಪಾತ್ರಗಳು ವಿಭಿನ್ನವಾಗಿವೆ.

ಅದರಲ್ಲೂ ಶಿವಣ್ಣ ಅವರನ್ನು ಈ ತರಹದ ಪಾತ್ರದಲ್ಲಿ ಈ ಹಿಂದೆ ಯಾವತ್ತೂ ನೋಡಿಲ್ಲ. ಸುಮಾರು ಕಡೆ ನನಗೆ ಅಣ್ಣಾವ್ರ ತರಹ ಕಾಣಿಸಿದರು. ಇದು ಕೇವಲ ಕನ್ನಡ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಕಥೆಯಲ್ಲ. ವರ್ಲ್ಡ್ಕ್ಲಾಸ್‌ ಸಿನಿಮಾ ಎನ್ನಬಹುದು. ಪ್ರತಿಯೊಂದು ಸಿನಿಮಾವನ್ನು ಹೊಸ ಮೈಂಡ್‌ಸೆಟ್‌ನಿಂದ ನೋಡಬೇಕು.

ಈ ತರಹ ಸಿನಿಮಾ ನೋಡಲು ನಾವು ಒಂಚೂರು ಬೇರೆ ತರಹದ ಮೈಂಡ್‌ ಸೆಟ್‌ನಲ್ಲಿ ಬರಬೇಕು. ನಾನಂತೂ "ಟಗರು'ನ ತುಂಬಾ ಎಂಜಾಯ್‌ ಮಾಡಿದೆ' ಎನ್ನುವ ಮೂಲಕ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ಚಿತ್ರ ಈಗಾಗಲೇ ಅಮೆರಿಕಾದಲ್ಲೂ ಬಿಡುಗಡೆಯಾಗಿದ್ದು, ಅಲ್ಲೂ ಕುಡಾ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

Trending videos

Back to Top