CONNECT WITH US  

ಬಿಡುಗಡೆಗಾಗಿ ಕಾದಿದ್ದಾರೆ ಜಾನಿ, ರ್‍ಯಾಂಬೋ, ದಳಪತಿ ...

ಯುಎಫ್ಓ ಮತ್ತು ಕ್ಯೂಬ್‌ ಸಂಸ್ಥೆಗಳ ವಿರುದ್ಧ ಸಿಡಿದೆದ್ದಿರುವ ದಕ್ಷಿಣ ಭಾರತದ ಚಲನಚಿತ್ರರಂಗ, ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮಾರ್ಚ್‌ 2ರಿಂದ ಹೊಸ ಚಿತ್ರಗಳ ಬಿಡುಗಡೆ ರದ್ದಾದರೆ, ಕರ್ನಾಟಕದಲ್ಲಿ ಕಳೆದ ಶುಕ್ರವಾರದಿಂದ (ಮಾರ್ಚ್‌ 9ರಿಂದ) ಯಾವುದೇ ಹೊಸ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ.

ಅಷ್ಟೇ ಅಲ್ಲ, ಸಮಸ್ಯೆ ಬಗೆಹರಿಯುವವರೆಗೂ ಅನಿರ್ಧಿಷ್ಟ ಕಾಲ ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಲಾಗಿದೆ. ಮುಂದಿನ ವಾರ ಹೇಗೋ ಗೊತ್ತಿಲ್ಲ. ಆದರೆ, ಈ ವಾರ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ಇದೆಲ್ಲದರಿಂದ ಬಿಡುಗಡೆಯಾಗಬೇಕಿರುವ ಚಿತ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ, ಯಾರು ಮೊದಲು ಸೆನ್ಸಾರ್‌ ಮಾಡಿಸಿ ಚಿತ್ರದ ಬಿಡುಗಡೆಯ ದಿನಾಂಕ ಘೋಷಿಸಿದ್ದರೋ, ಅವರಿಗೆ ಮೊದಲ ಆದ್ಯತೆ ಎಂಬ ಆಶ್ವಾಸನೆಯೇನೋ ಸಿಕ್ಕಿದೆ.

ಹಾಗಾಗಿ ಚಿತ್ರ ಬಿಡುಗಡೆ ಶುರುವಾದ ಮೇಲೆ, ಮಾರ್ಚ್‌ 9ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರಗಳೆಲ್ಲಾ ಮೊದಲು ಬಿಡುಗಡೆಯಾಗಲಿವೆ. ಇದರಿಂದ ತಿಂಗಳ ಕೊನೆಗೆ ಬಿಡುಗಡೆ ಮಾಡಬೇಕೆಂದುಕೊಂಡವರಿಗೆ ಭಯ ಪ್ರಾರಂಭವಾಗಿದೆ. ಏಕೆಂದರೆ, ಎಲ್ಲರೂ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಬೇಕಿದೆ. "ರಾಜರಥ' ಚಿತ್ರದ ಬಿಡುಗಡೆಯನ್ನು ಇದುವರೆಗೂ ಎರಡ್ಮೂರು ಬಾರಿ ಮುಂದೂಡಲಾಗಿತ್ತು. ಈಗ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಅದರಂತೆ "ಜಾನಿ ಜಾನಿ ಎಸ್‌ ಪಾಪ್ಪ', "ರ್‍ಯಾಂಬೋ 2', "ದಳಪತಿ', "ಹುಚ್ಚ 2', "ಕಿಚ್ಚು' ಚಿತ್ರಗಳು ಸಹ ಮುಂದಕ್ಕೆ ಹೋಗಲಿವೆ.

Trending videos

Back to Top