CONNECT WITH US  

ಪ್ರೀಮಿಯರ್‌ ಪದ್ಮಿನಿಯಲ್ಲಿ ಜಗ್ಗೇಶ್‌

ಶ್ರುತಿನಾಯ್ಡು ನಿರ್ಮಾಣದ ಮೊದಲ ಚಿತ್ರ

ನಟ ಜಗ್ಗೇಶ್‌ ಅವರೀಗ ಪ್ರೀಮಿಯರ್‌ ಪದ್ಮಿನಿ ಕಾರು ಏರಿದ್ದಾರೆ! ಅರೇ, ಇದೇನಪ್ಪಾ ಜಗ್ಗೇಶ್‌ ಹಳೇ ಕಾರಲ್ಲಿ ಕೂತುಕೊಂಡ್ರಾ ಎಂಬ ಪ್ರಶ್ನೆ ಎದುರಾದರೆ, ಅಚ್ಚರಿಯೇನಿಲ್ಲ. "ಪ್ರೀಮಿಯರ್‌ ಪದ್ಮಿನಿ' ಎಂಬುದು ಅವರು ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು. ಜಗ್ಗೇಶ್‌ ನಟಿಸಿರುವ "8 ಎಂಎಂ' ಬಿಡುಗಡೆಗೆ ರೆಡಿಯಾಗಿದೆ. ಆದರ ಬೆನ್ನಲ್ಲೇ ಜಗ್ಗೇಶ್‌ "ಪ್ರೀಮಿಯರ್‌ ಪದ್ಮಿನಿ' ಚಿತ್ರ ಒಪ್ಪಿಕೊಂಡಿದ್ದಾರೆ.

ಈ ಚಿತ್ರಕ್ಕೆ ಶ್ರುತಿನಾಯ್ಡು ನಿರ್ಮಾಪಕಿ. ಇದುವರೆಗೆ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿ,ನಿರ್ಮಿಸಿದ್ದ ಶ್ರುತಿನಾಯ್ಡು ಅವರೀಗ ಇದೇ ಮೊದಲ ಬಾರಿಗೆ ಸಿನಿಮಾ ರಂಗಕ್ಕೂ ನಿರ್ಮಾಪಕರಾಗಿ ಎಂಟ್ರಿಕೊಟ್ಟಿದ್ದಾರೆ. ಅಂದಹಾಗೆ, ಅವರ ಪತಿ ರಮೇಶ್‌ ಇಂದ್ರ ಅವರೇ ಈ ಚಿತ್ರದ ನಿರ್ದೇಶಕರು. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ರಮೇಶ್‌ ಇಂದ್ರ ಅವರೇ ವಹಿಸಿಕೊಂಡಿದ್ದಾರೆ.

ಇದೊಂದು ಫ್ಯಾಮಿಲಿ ಡ್ರಾಮ ಹೊಂದಿರುವ ಚಿತ್ರ. ಲವ್‌ಸ್ಟೋರಿ ಇದೆ. ಎಮೋಷನಲ್‌ ಇದೆ. ದೃಶ್ಯಗಳಿಗೆ ಪೂರಕವಾದಂತಹ ಹಾಸ್ಯವೂ ಇದೆ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಈಗಿನ ವಾಸ್ತವತೆಯ ಅಂಶಗಳು ಇರಲಿವೆ. ಯೂಥ್‌ಗೊಂದು ಹೊಸ ಜಮಾನದ ಸಿನಿಮಾ ಇದಾಗಲಿದೆ ಎಂಬುದು ನಿರ್ದೇಶಕರ ಮಾತು. ಜಗ್ಗೇಶ್‌ ಇದ್ದಾರೆಂದಮೇಲೆ ಹಾಸ್ಯಕ್ಕೇನೂ ಕೊರತೆ ಇಲ್ಲ. ಹಾಗಂತ ಇಡೀ ಸಿನಿಮಾ ಅದರ ಸುತ್ತವೇ ಸುತ್ತುವುದಿಲ್ಲ.

ಇಲ್ಲಿ ಅನೇಕ ಸಂಗತಿಗಳು ತೇಲಿಬರಲಿವೆ. ಅಪ್ಪಟ ಮನರಂಜನೆಯ ಜೊತೆಗೊಂದು ಸಂದೇಶವೂ ಇರಲಿದೆ. ಶೀರ್ಷಿಕೆಯಲ್ಲೇ ಒಂದು ಸೆಳೆತವಿದೆ. ಹಾಗಾಗಿ, ಸಿನಿಮಾದಲ್ಲೂ ಅಂತಹ ಅಂಶಗಳು ಸೆಳೆಯುತ್ತವೆ ಎನ್ನುತ್ತಾರೆ ನಿರ್ದೇಶಕ ರಮೇಶ್‌ ಇಂದ್ರ. ಚಿತ್ರದಲ್ಲಿ ಜಗ್ಗೇಶ್‌ ಜೊತೆ ಮಧುಬಾಲ ಕಾಣಿಸಿಕೊಳ್ಳುತ್ತಿದ್ದಾರೆ. "ರನ್ನ' ಬಳಿಕ "ಸೀತಾರಾಮ ಕಲ್ಯಾಣ' ಚಿತ್ರದಲ್ಲೂ ನಟಿಸುತ್ತಿರುವ ಮಧುಬಾಲ ಈಗ "ಪ್ರೀಮಿಯರ್‌ ಪದ್ಮಿನಿ' ಚಿತ್ರದ ಮೂಲಕ ಪುನಃ ಬರುತ್ತಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಸುಧಾರಾಣಿ, ಸಿಹಿಕಹಿ ಗೀತಾ, "ಗೀತಾ ಬ್ಯಾಂಗಲ್‌ ಸ್ಟೋರ್' ಹೀರೋ ಪ್ರಮೋದ್‌ ಇತರರು ನಟಿಸುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ನಾಲ್ಕು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಅದ್ವೆ„ತ ಛಾಯಾಗ್ರಹಣವಿದೆ. ಏ. 18 ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಚುನಾವಣೆ ನಂತರ ಚಿತ್ರೀಕರಣ ಶುರುವಾಗಲಿದೆ.

Back to Top