CONNECT WITH US  

ಮೇಕಿಂಗ್ ದರ್ಶನ ಕೊಟ್ಟ "ಕುರುಕ್ಷೇತ್ರ' ಟೀಮ್

ಚಾಲೆಂಜಿಂಗ್​ ಸ್ಟಾರ್ ದರ್ಶನ್​, ದುರ್ಯೋಧನನಾಗಿ ಅಭಿನಯಿಸುತ್ತಿರುವ ಮುನಿರತ್ನ ನಿರ್ಮಾಣದ ಬಹುಕೋಟಿ ಬಜೆಟಿನ ನಿರೀಕ್ಷಿತ ಚಿತ್ರ "ಕುರುಕ್ಷೇತ್ರ' ಟೀಸರ್'ಗಳು ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದರೆ, ಇದೀಗ ಚಿತ್ರತಂಡ ಮತ್ತೊಂದು ಮೇಕಿಂಗ್​ ವಿಡಿಯೋ ರಿಲೀಸ್ ಮಾಡಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ.

ಅಲ್ಲದೇ ಮೇಕಿಂಗ್ ವಿಡಿಯೋದಲ್ಲಿ ಚಿತ್ರದ ಪ್ರಮುಖ ಪಾತ್ರಗಳ ಲುಕ್ ರಿವೀಲ್ ಮಾಡಿದೆ. ಚಿತ್ರದಲ್ಲಿ ಕೃಷ್ಣನಾಗಿ ರವಿಚಂದ್ರನ್, ಭೀಷ್ಮನಾಗಿ ಅಂಬರೀಶ್, ಅರ್ಜುನ್​ ಸರ್ಜಾ ಕರ್ಣನಾಗಿ, ಭಾನುಮತಿಯಾಗಿ ಮೇಘನಾ ರಾಜ್​, ಅರ್ಜುನನ ಪಾತ್ರದಲ್ಲಿ ಸೋನುಸೂದ್ ಕಾಣಿಸಿಕೊಂಡರೆ ಶಕುನಿಯಾಗಿ ರವಿಶಂಕರ್ ನಟಿಸಿದ್ದಾರೆ. ಅಲ್ಲದೇ ಈ ಹಿಂದೆ ಕುರುಕ್ಷೇತ್ರ ಚಿತ್ರತಂಡ ದುರ್ಯೋಧನ ಹಾಗೂ ಅಭಿಮನ್ಯುವಿನ ಟೀಸರ್​ ಬಿಡುಗಡೆ ಮಾಡಿ ಸಿನಿಪ್ರಿಯರಿಂದ ಮೆಚ್ಚುಗೆ ಪಡೆದಿತ್ತು.

ಇನ್ನು ಚಿತ್ರಕ್ಕೆ ಹೆಸರಾಂತ ತಂತ್ರಜ್ಞರ ತಂಡವನ್ನು ಕಲೆ ಹಾಕಲಾಗಿದ್ದು, ಜಯನನ್‌ ವಿನ್ಸೆಂಟ್‌ ಛಾಯಾಗ್ರಹಣ, "ಕಿಂಗ್‌ ಸಾಲೋಮನ್‌' ರವಿ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಜಿ.ಕೆ. ಭಾರವಿ ಅವರು ಚಿತ್ರಕಥೆಯನ್ನು ರಚಿಸಿದ್ದು, ಯೋಜನಾ ನಿರ್ದೇಶಕರಾಗಿ ಜಯಶ್ರೀದೇವಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಹಿರಿಯ ನಿರ್ದೇಶಕ ನಾಗಣ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

Trending videos

Back to Top