CONNECT WITH US  

ಧಮ್‌ ಮಾರೋ ಧಮ್‌ ಎಂದ ಐಂದ್ರಿತಾ

ರ್‍ಯಾಂಬೋ 2ನ ಹಾಡಿನಲ್ಲಿ ಅತಿಥಿ ಪಾತ್ರ

ಶರಣ್‌ ಅಭಿನಯದ "ರ್‍ಯಾಂಬೋ 2' ಚಿತ್ರದ ಒಂದು ರಹಸ್ಯ ತಡವಾಗಿ ಬೆಳಕಿಗೆ ಬಂದಿದೆ. ಅದೇನೆಂದರೆ, ಇದುವರೆಗೂ ಚಿತ್ರದಲ್ಲಿ ಶ್ರುತಿ ಹರಿಹರನ್‌, ಶುಭಾ ಪೂಂಜ, ಸಂಚಿತಾ ಪಡುಕೋಣೆ, ಭಾವನಾ ರಾವ್‌ ಮತ್ತು ಮಯೂರಿ ಮಾತ್ರ ಒಂದು ಹಾಡಿನಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಇವರಲ್ಲದೆ ಐಂದ್ರಿತಾ ಸಹ ಈ ಚಿತ್ರದ ಇನ್ನೊಂದು ಹಾಡಿನಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿರುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.

ಹೌದು, "ರ್‍ಯಾಂಬೋ 2' ಚಿತ್ರದ "ಧಮ್‌ ಮಾರೋ ಧಮ್‌' ಹಾಡಿನಲ್ಲಿ ಐಂದ್ರಿತಾ ಹೆಜ್ಜೆ ಹಾಕಿದ್ದಾರೆ. ವಿಶೇಷವೆಂದರೆ, ಈ ಹಾಡನ್ನು ಹಾಡಿರುವುದು ನಟ ಹಾಗೂ ಕಲಾ ನಿರ್ದೇಶಕ ಅರುಣ್‌ ಸಾಗರ್‌ ಅವರ ಮಗಳು ಅದಿತಿ. ಅದಿತಿ ಈ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಪರಿಚಿತರಾಗಿದ್ದು, ಅವರು ಹಾಡಿರುವ "ಧಮ್‌ ಮಾರೋ ಧಮ್‌ ...' ಸಾಕಷ್ಟು ಜನಪ್ರಿಯವಾಗಿದೆ.

ಅದಿತಿಯನ್ನು ಗಾಯಕಿಯನ್ನಾಗಿ ಪರಿಚಯಿಸಿರುವುದು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ. ಶರಣ್‌ ತಮ್ಮ ಲಡ್ಡು ಸಿನಿಮಾ ಬ್ಯಾನರ್‌ನಡಿ ಈ "ರ್‍ಯಾಂಬೋ 2' ಚಿತ್ರವು ಬಿಡುಗಡೆಯಾಗುತ್ತಿದ್ದು, ಚಿತ್ರದ ನಿರ್ಮಾಣದಲ್ಲಿ ಅಟ್ಲಾಂಟ ನಾಗೇಂದ್ರ ಹಾಗೂ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರು ಕೈ ಜೋಡಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಛಾಯಾಗ್ರಾಹಕ ಸುಧಾಕರ್‌ ರಾಜ್‌,

ಸಂಕಲನಕಾರ ಕೆ.ಎಂ. ಪ್ರಕಾಶ್‌, ಕಲಾ ನಿರ್ದೇಶಕ ಮೋಹನ್‌ ಬಿ ಕೆರೆ, ಕ್ರಿಯೇಟಿವ್‌ ಹೆಡ್‌ ತರುಣ್‌ ಸುಧೀರ್‌ ಇವರೆಲ್ಲಾ ವರ್ಕಿಂಗ್‌ ಪಾಟ್ನರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಶರಣ್‌ಗೆ ನಾಯಕಿಯಾಗಿ ಆಶಿಕಾ ನಟಿಸಿದ್ದು, ಚಿಕ್ಕಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಏಪ್ರಿಲ್‌ ಕೊನೆಯ ವಾರ ಅಥವಾ ಮೇ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Back to Top