ಗಣೇಶನಿಗೆ ಗಣೇಶ್ ಧ್ವನಿ
Team Udayavani, May 14, 2018, 11:03 AM IST
ಶರಣ್ ನಾಯಕರಾಗಿರುವ “ರ್ಯಾಂಬೋ-2′ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ಅನಿಲ್ ಕುಮಾರ್ ಈ ಸಿನಿಮಾದ ನಿರ್ದೇಶಕರು. ಈಗ ಈ ಚಿತ್ರದ ಸನ್ನಿವೇಶವೊಂದಕ್ಕೆ ನಟ ಗಣೇಶ್ ಧ್ವನಿ ನೀಡಿದ್ದಾರೆ. ವಿಶೇಷವೆಂದರೆ ಗಣೇಶ್ ಧ್ವನಿ ಕೊಟ್ಟಿರೋದು ಗಣೇಶನಿಗೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು.
ಚಿತ್ರದ ಕಥೆಯಲ್ಲಿ ವಿಘ್ನ ವಿನಾಶಕ ಗಣೇಶ ಸನ್ನಿವೇಶವೊಂದು ಬರುತ್ತದೆಯಂತೆ. ಈ ದೃಶ್ಯಗಳನ್ನು ಅನಿಮೇಶನ್ ಮೂಲಕ ಚಿತ್ರತಂಡ ಸೃಷ್ಟಿಸಿದೆ. ಇದು ಮಕ್ಕಳಿಗೆ ಹೆಚ್ಚು ಖುಷಿಕೊಡಬಹುದು ಎಂಬುದು ಚಿತ್ರತಂಡದ ನಂಬಿಕೆ. ಚಿತ್ರದಲ್ಲಿ ಬರುವ ಗಣೇಶನಿಗೆ ಯಾರಿಂದ ಧ್ವನಿ ಕೊಡಿಸೋದು ಎಂದು ಚಿತ್ರತಂಡ ಯೋಚಿಸುತ್ತಿದ್ದಾಗ ಅವರ ಕಣ್ಣ ಮುಂದೆ ಬಂದಿದ್ದು ನಟ ಗಣೇಶ್ ಮುಖ.
ಅದರಂತೆ ಗಣೇಶ್ ಕೂಡಾ ಗಣೇಶನಿಗೆ ಧ್ವನಿ ನೀಡಿದ್ದಾರೆ. ಎಲ್ಲಾ ಓಕೆ, ಗಣೇಶನ ಜೊತೆಗಿರುವ ಮೂಷಿಕನಿಗೆ ಯಾರು ಧ್ವನಿ ನೀಡಿದ್ದಾರೆಂದು ನೀವು ಕೇಳಬಹುದು. ಚಿತ್ರದಲ್ಲಿ ಬರುವ ಇಲಿಗೆ ಕಾಮಿಡಿ ಕಿಲಾಡಿಗಳ ಮೂಲಕ ಬೆಳಕಿಗೆ ಬಂದ ಶಿವರಾಜ್ ಕೆ.ಆರ್.ಪೇಟೆ ಧ್ವನಿ ನೀಡಿದ್ದಾರೆ. ಅಂದಹಾಗೆ, “ರ್ಯಾಂಬೋ-2′ ಚಿತ್ರವನ್ನು ತಂತ್ರಜ್ಞರೆಲ್ಲಾ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಆಶಿಕಾ ನಾಯಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ