ಧ್ರುವ ಹೇಳ್ತಿದ್ದಾರೆ "ಅಮ್ಮಾ ಐ ಲವ್‌ ಯೂ' | Udayavani - ಉದಯವಾಣಿ
   CONNECT WITH US  
echo "sudina logo";

ಧ್ರುವ ಹೇಳ್ತಿದ್ದಾರೆ "ಅಮ್ಮಾ ಐ ಲವ್‌ ಯೂ'

ಚಿರಂಜೀವಿ ಸರ್ಜಾ ನಟಿಸಿರುವ ದ್ವಾರಕೀಶ್‌ ಚಿತ್ರದಡಿ ನಿರ್ಮಾಣವಾಗುತ್ತಿರುವ 51ನೇ ಚಿತ್ರವಾದ "ಅಮ್ಮಾ ಐ ಲವ್‌ ಯೂ' ಚಿತ್ರದ ಟೀಸರ್ ವಿಶ್ವ ಅಮ್ಮಂದಿರ ದಿನದಂದು ಬಿಡುಗಡೆಯಾಗಿದೆ. 

ಟೀಸರ್'ಗೆ ಧ್ರುವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದು, ತಾಯಿಯ ಮಹತ್ವ, ಆಕೆಯ ಮೇಲೆ ಎಲ್ಲರೂ ಎಷ್ಟು ಅವಲಂಬಿತವಾಗಿದ್ದೇವೆ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ಟೀಸರ್'ನಲ್ಲಿ ಹೇಳಿದ್ದಾರೆ. ಹಾಗೂ ತಾಯಿಯಿಂದ ನಾವು ಏನು ಬಯಸುತ್ತೇವೆ? ಮತ್ತು ಆಕೆಗೆ ಪ್ರತಿಫಲವಾಗಿ ನಾವು ಏನನ್ನು ನೀಡುತ್ತೇವೆ ಎಂಬ ಅಂಶ ಇದ್ದು, ತಂದೆಯಾಗಲು ಒಂದು ಕ್ಷಣ ಸಾಕು, ತಾಯಿಯಾಗಲು ಒಂದು ಜೀವನ ಬೇಕು ಎಂಬ ಸಂದೇಶ ಈ ಟೀಸರ್'ನಲ್ಲಿದೆ.

ಇನ್ನು ಚಿತ್ರದಲ್ಲಿ ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರಾ ಅಭಿನಯಿಸಿದ್ದು, ಚಿರುಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಅಲ್ಲದೇ ರವಿಕಾಳೆ ಸೇರಿದಂತೆ ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವು ತಮಿಳಿನ "ಪಿಚ್ಚೈಕಾರನ್' ರಿಮೇಕ್. ತಾಯಂದಿರ ಅಂಗವಾಗಿ ಈ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲಾ ತಾಯಂದಿರಿಗೂ ಇದನ್ನು ಅರ್ಪಿಸಲಾಗಿದೆ. 

ಇಂದು ಹೆಚ್ಚು ಓದಿದ್ದು

ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ "ಪ್ರತಿಭಾ ಪುರಸ್ಕಾರ'ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

Aug 20, 2018 06:00am

Trending videos

Back to Top