ಟಗರು ಶತದಿನ ಸಂಭ್ರಮ
Team Udayavani, Jun 4, 2018, 11:03 AM IST
ಶಿವರಾಜಕುಮಾರ್ ಅಭಿನಯದ “ಟಗರು’ ಚಿತ್ರ ಭರ್ಜರಿಯಾಗಿ ಶತದಿನ ಪೂರೈಸಿದೆ. ಈ ಖುಷಿಯನ್ನು ಶಿವರಾಜ ಕುಮಾರ್ ಅಭಿಮಾನಿಗಳು ಸಂಘಗಳು ಭಾನುವಾರ ಅದ್ಧೂರಿಯಾಗಿ ಆಚರಿಸಿದೆ. ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳು “ಟಗರು’ ತಂಡವನ್ನು ಸನ್ಮಾನಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
ಶಿವರಾಜಕುಮಾರ್, ಮಾನ್ವಿತಾ ಹರೀಶ್, ಧನಂಜಯ್, ನಿರ್ದೇಶಕ ಸೂರಿ, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸೇರಿದಂತೆ ಚಿತ್ರತಂಡ ಶತದಿನ ಸಂಭ್ರಮದಲ್ಲಿ ಭಾಗಿಯಾಗಿತ್ತು. “ಟಗರು’ ತಂಡವನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕಿಕ್ಕಿರಿದ್ದು ಸೇರಿದ್ದು, ಜೈಕಾರ, ಶಿಳ್ಳೆಯೊಂದಿಗೆ ತಮ್ಮ ಅಭಿಮಾನ ಪ್ರದರ್ಶಿಸಿದರು.
ಆಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಖುಷಿ ಹಂಚಿಕೊಂಡ ಶಿವಣ್ಣ, ಅಭಿಮಾನಿಗಳ ಒತ್ತಾಯಕ್ಕೆ “ಟಗರು’ ಚಿತ್ರದ “ಟಗರು ಬಂತು ಟಗರು’ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದರು. ಇದೇ ವೇಳೆ ಶಿವರಾಜಕುಮಾರ್ ಅಭಿಮಾನಿ ಸಂಘಗಳು “ಟಗರು’ ಚಿತ್ರತಂಡವನ್ನು ಸನ್ಮಾನಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್