CONNECT WITH US  

ಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತ್‌

ನಾರಾಯಣನಿಗೆ ಪೋಸ್ಟರ್‌; ಚಾರ್ಲಿಗೆ ಮುಹೂರ್ತ

ರಕ್ಷಿತ್‌ ಶೆಟ್ಟಿ ಬುಧವಾರ ತಮ್ಮ ವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬಕ್ಕೆ ಸಾಕಷ್ಟು ಚಟುವಟಿಕೆಗಳು ನಡೆದಿರುವುದು ವಿಶೇಷ. ಪ್ರಮುಖವಾಗಿ ಮಂಗಳವಾರ ರಾತ್ರಿಯಿಂದಲೇ ರಕ್ಷಿತ್‌ ಸ್ನೇಹಿತರು ಮತ್ತು ಹಿತೈಷಿಗಳು, ಸಂಭ್ರಮಾಚರಣೆ ಪ್ರಾರಂಭಿಸಿ ರಕ್ಷಿತ್‌ರಿಂದ ಕೇಕು ಕಟ್‌ ಮಾಡಿಸಿದರು.

ಈ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ, ರಿಷಭ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ, ಶೀತಲ್‌ ಶೆಟ್ಟಿ ಸೇರಿದಂತೆ ಹಲವರು ರಕ್ಷಿತ್‌ಗೆ ಶುಭ ಹಾರೈಸಿದರು. ಇನ್ನು ಬುಧವಾರ ಬೆಳಿಗ್ಗೆಯೂ ರಕ್ಷಿತ್‌ ಹುಟ್ಟುಹಬ್ಬದ ಸಂಭ್ರಮಾಚರಣೆ ಮುಂದುವರೆಯಿತು. ರಕ್ಷಿತ್‌ ಅನೇಕ ಅಭಿಮಾನಿಗಳು ಹಾರ, ತುರಾಯಿ, ಕೇಕುಗಳೊಂದಿಗೆ ಬಂದು ರಕ್ಷಿತ್‌ಗೆ ಶುಭ ಕೋರಿದರು.

ಇದಾದ ನಂತರ, ಧರ್ಮಗಿರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಕ್ಷಿತ್‌ ಅಭಿನಯದ ಹೊಸ ಚಿತ್ರ "777 ಚಾರ್ಲಿ' ಪ್ರಾರಂಭವಾಯಿತು. ಈ ಮುಹೂರ್ತಕ್ಕೆ ಮತ್ತು ರಕ್ಷಿತ್‌ಗೆ ಶುಭ ಹಾರೈಸುವುದಕ್ಕೆ ಸಾಕಷ್ಟು ಜನ ಬಂದಿದ್ದರು. ಇದೆಲ್ಲದರ ಜೊತೆಗೆ ರಕ್ಷಿತ್‌ ಹುಟ್ಟುಹಬ್ಬದ ಅಂಗವಾಗಿ "ಅವನೇ ಶ್ರೀಮನ್ನಾರಯಣ' ಚಿತ್ರದ ಮೊದಲ ಲುಕ್‌ ಮತ್ತು ಟೀಸರ್‌ ಹಾಗೂ "ಚಾರ್ಲಿ' ಚಿತ್ರದ ಪೋಸ್ಟರ್‌ ಸಹ ಯಾಯಿತು.


Trending videos

Back to Top