CONNECT WITH US  

"ಗ್ರಾಮ' ಚಿತ್ರದ ಮೊದಲ ಹಂತ ಮುಕ್ತಾಯ

ಯಶ್‌ದೀಪ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಹೇಮಂತಕುಮಾರ್‌ ಅವರು ನಿರ್ಮಿಸುತ್ತಿರುವ "ಗ್ರಾಮ' ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮಾಸಾಂತ್ಯಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕ- ಆಂದ್ರ ಪ್ರದೇಶ ಗಡಿಯ, ಚಿಂತಾಮಣಿ ಬಳಿಯ ಹಳ್ಳಿಯೊಂದರಲ್ಲೇ ಚಿತ್ರಕ್ಕೆ 23 ದಿನಗಳ ಚಿತ್ರೀಕರಣ ನಡೆದಿದೆ.

ಮಾತಿನ ಭಾಗದ ಚಿತ್ರೀಕರಣದೊಂದಿಗೆ, ಒಂದು ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಈ ಹಂತದಲ್ಲಿ ನಡೆದಿದೆ. ಲಿಖಿತ್‌ ಸೂರ್ಯ, ಲಹರಿ, ಸತ್ಯಪ್ರಕಾಶ್‌, ಸುಧಾರಾಣಿ, ಶಿಪ್ರ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.   

ಹರಿ ಕಿರಣ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ಒಂದು ಚಿತ್ರ ನಿರ್ದೇಶಿಸಿ, ಹತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಒದಗಿಸಿರುವ ಹರಿ ಕಿರಣ್‌ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಕೃಷ್ಣಪ್ರಸಾದ್‌ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರವಿಕಲ್ಯಾಣ್‌ ಸಂಗೀತ ನೀಡಿದ್ದಾರೆ.

ಬಾಬಿ ಸಂಕಲನ, ವಿಜಯ್‌ ಕೃಷ್ಣ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್‌ ಮಂಜು, ಶಿವು,  ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ವಿಜಯ್‌ ಭರಮಸಾಗರ ಗೀತರಚನೆ ಮಾಡಿ, ಸಂಭಾಷಣೆಯನ್ನು ಬರೆದಿದ್ದಾರೆ. ಲಿಖಿತ್‌ ಸೂರ್ಯ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಲಹರಿ. ಶಿಪ್ರ, ಸತ್ಯಪ್ರಕಾಶ್‌, ಸುಧಾರಾಣಿ, ಸುಮನ್‌, ಗಾಂಧಿ, ಸಾಧುಕೋಕಿಲ, ಗೋಟುರಿ, ಶ್ರೇಯಸ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Trending videos

Back to Top