CONNECT WITH US  

ಅನಿರುದ್ಧ್ ಈಗ ಆ್ಯಂಕರ್‌

ರಾಜಕೀಯ ಮುಖಂಡರ ಜೊತೆ ಚರ್ಚೆ

"ರಾಜಸಿಂಹ' ಚಿತ್ರದ ನಂತರ ಒಂದಿಷ್ಟು ಗ್ಯಾಪ್‌ ತೆಗೆದುಕೊಂಡಿದ್ದ ಅನಿರುದ್ಧ್, ಈಗ ಟಿವಿ ನಿರೂಪಕರಾಗಿ ಮತ್ತೂಮ್ಮೆ ಎಂಟ್ರಿ ಕೊಡುತ್ತಿದ್ದಾರೆ. ಯಾವ ಚಾನಲ್ಲು, ಯಾವ ಕಾರ್ಯಕ್ರಮ ಅಂತೆಲ್ಲಾ ನೂರೆಂಟು ಪ್ರಶ್ನೆಗಳು ಬರಬಹುದು. ಅನಿರುದ್ಧ್ ಟಿವಿ ಕಾರ್ಯಕ್ರಮವನ್ನೇನೂ ನಡೆಸಿಕೊಡುತ್ತಿಲ್ಲ. ಬದಲಿಗೆ "ಅಭಯಹಸ್ತ' ಎಂಬ ಚಿತ್ರದಲ್ಲಿ ಟಿವಿ ನಿರೂಪಕನಾಗಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ಅನಿರುದ್ಧ ಅಭಿನಯದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. "ಅಭಯಹಸ್ತ' ಚಿತ್ರವನ್ನು ನವೀನ್‌ ಎನ್ನುವವರು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ರಾಜೇಂದ್ರ ಸೂರಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಈ ಚಿತ್ರವನ್ನು ಡಾ.ಪಿ. ಸತೀಶ್‌ಕುಮಾರ್‌ ಮೆಹ¤ ಹಾಗೂ ನವೀನ್‌ ನಿರ್ಮಿಸುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಅನಿರುದ್ಧ್, ಮೀಸೆ ಆಂಜನಪ್ಪ ಹಾಗೂ ನಾಗರಾಜಮೂರ್ತಿ ಅಭಿನಯದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಅನಿರುದ್ಧ್ ಅವರು ವಾಹಿನಿಯೊಂದರ ನಿರೂಪಕನಾಗಿ ನಟಿಸಿದರೆ, ಆಂಜನಪ್ಪ ಅವರು ಆಡಳಿತ ಪಕ್ಷದ ನಾಯಕನಾಗಿ ಹಾಗೂ ನಾಗರಾಜಮೂರ್ತಿ ಅವರು ವಿರೋಧ ಪಕ್ಷದ ನಾಯಕನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಿನ ರಾಜಕೀಯದ ಕುರಿತು ಮೂವರು ಚರ್ಚಿಸುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಾಗಿದೆ. "ಅಭಯಹಸ್ತ' ಚಿತ್ರಕ್ಕೆ ಕಾರ್ತಿಕ್‌ ವೆಂಕಟೇಶ್‌ ಅವರು ಛಾಯಾಗ್ರಹಣದ ಜೊತೆಗೆ ಸಂಕಲನವನ್ನೂ ಮಾಡಿದ್ದಾರೆ. ಪ್ರವೀಣ್‌ ಅವರ ಸಂಗೀತವಿರುವ ಈ ಚಿತ್ರಕ್ಕೆ ಶಿವರಾಜಕುಮಾರ್‌, ನವೀನ್‌ ಕೃಷ್ಣ, ಮನೋಜವಂ ಮುಂತಾದವರು ಹಾಡಿದ್ದಾರೆ.

Trending videos

Back to Top