CONNECT WITH US  
echo "sudina logo";

ತೆಲುಗು, ಮಲಯಾಳಂಗೆ ರಘು ದೀಕ್ಷಿತ್‌

ವೈಫ್ ಆಫ್ ರಾಮ್‌ ಮತ್ತು ಕೂಡೆ ಚಿತ್ರಗಳಿಗೆ ಸಂಗೀತ ನಿರ್ದೇಶನ

ಕಳೆದ ವರ್ಷ ಬಿಡುಗಡೆಯಾದ "ಹ್ಯಾಪಿ ನ್ಯೂ ಇಯರ್‌' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು ರಘು ದೀಕ್ಷಿತ್‌. ಅದಾದ ಮೇಲೆ "ಆರ್ಕೆಸ್ಟ್ರಾ', "ಗರುಡ' ಸೇರಿದಂತೆ ಇನ್ನೊಂದಿಷ್ಟು ಚಿತ್ರಗಳಿಗೆ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದ್ದರು. ಅದ್ಯಾಕೋ, "ಹ್ಯಾಪಿ ನ್ಯೂ ಇಯರ್‌' ನಂತರ ಅವರು ಸಂಗೀತ ನಿರ್ದೇಶಿಸಿರುವ ಯಾವೊಂದು ಚಿತ್ರವೂ ಬಿಡುಗಡೆಯಾಗಲೇ ಇಲ್ಲ.

ಹಾಗೆ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ರಘು ಸದ್ದಿಲ್ಲದೆ ತೆಲುಗು ಮತ್ತು ಮಲಯಾಳಂಗೆ ಹಾರಿದ್ದಾರೆ. ಹೌದು, ರಘು ದೀಕ್ಷಿತ್‌ ಇದೀಗ ತೆಲುಗು ಮತ್ತು ಮಲಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ವೇಲಕಂಠಿ ನಿರ್ದೇಶಿಸಿರುವ "ವೈಫ್ ಆಫ್ ರಾಮ್‌' ಎಂಬ ಚಿತ್ರಕ್ಕೆ ರಘು ದೀಕ್ಷಿತ್‌ ಸಂಗೀತ ಸಂಯೋಜಿಸಿದ್ದಾರೆ. ಇದೊಂದು ಥ್ರಿಲ್ಲರ್‌ ಚಿತ್ರವಾಗಿದ್ದು, ಮೋಹನ್‌ ಬಾಬು ಅವರ ಮಗಳು ಲಕ್ಷ್ಮೀ ಮಂಚು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಟ್ರೇಲರ್‌ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದಲ್ಲದೆ ಅವರು ಮಲಯಾಳಂನಲ್ಲಿ "ಕೂಡೆ' ಎಂಬ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವನ್ನು ಅಂಜಲಿ ಮೆನನ್‌ ಎನ್ನುವವರು ನಿರ್ದೇಶಿಸಿದ್ದು, ಚಿತ್ರಕ್ಕೆ ಇಬ್ಬರು ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ನಾಲ್ಕು ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ರಘು ದೀಕ್ಷಿತ್‌ ಸಂಯೋಜಿಸಿದರೆ, ಹಿರಿಯ ಸಂಗೀತ ನಿರ್ದೇಶಕ ಎಂ. ಜಯಚಂದ್ರನ್‌ ಎರಡು ಹಾಡುಗಳನ್ನು ಸಂಯೋಜಿಸುತ್ತಿದ್ದಾರೆ. ಈ ಎರಡೂ ಚಿತ್ರಗಳು ಬಹುತೇಕ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿವೆ.

Trending videos

Back to Top