CONNECT WITH US  

ಡಬ್ಬಲ್‌ ಇಂಜಿನ್‌ ಹತ್ತಿದ ಚಿರಯೌವ್ವನೆ

ಚಿಕ್ಕಣ್ಣನ ಜೊತೆಗೆ ಸುಮನ್‌ ಸರಸ-ಸಲ್ಲಾಪ

ಈಯಮ್ಮನಿಗೆ ವಯಸ್ಸೇ ಆಗಲ್ಲ ಬಿಡಿ ... ಸುಮನ್‌ ರಂಗನಾಥನ್‌ ನೋಡಿದವರು ಮೊದಲು ಹೇಳುವ ಮಾತಿದೆ. ಅದಕ್ಕೆ ಕಾರಣ ಗ್ಲಾಮರ್‌. ಹರೆಯದ ಯಾವ ನಟಿಗೂ ಕಮ್ಮಿ ಇಲ್ಲದಂತಹ ಗ್ಲಾಮರ್‌ನಲ್ಲಿ ಮಿಂಚುವ ಮೂಲಕ ಸುಮನ್‌ ರಂಗನಾಥ್‌ ಇಂದಿಗೂ ಬೇಡಿಕೆಯ ನಟಿಯಾಗಿದ್ದಾರೆ. 1989ರಲ್ಲಿ ಆರಂಭವಾದ ಸುಮನ್‌ ರಂಗನಾಥ್‌ ಅವರ ಜರ್ನಿ ಇಲ್ಲಿವರೆಗೆ ಯಶಸ್ವಿಯಾಗಿ ಸಾಗಿಬಂದಿದೆ.

ಕನ್ನಡ, ತೆಲುಗು, ತಮಿಳು, ಹಿಂದಿ ... ಹೀಗೆ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಸುಮನ್‌ ರಂಗನಾಥ್‌ ನಟಿಸಿ ಬಂದಿದ್ದಾರೆ. ಸುಮನ್‌ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಹೆಸರು ಕೊಟ್ಟ ಸಿನಿಮಾ "ಸಿದ್ಲಿಂಗು'. ಆ ಚಿತ್ರದ ಆಂಡಲಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು ಸುಮನ್‌. ಆ ನಂತರ "ನೀರ್‌ ದೋಸೆ'ಯಲ್ಲೂ ಸುಮನ್‌ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿತ್ತು. ಸದ್ಯ ಸುಮನ್‌ ರಂಗನಾಥ್‌ "ಡಬಲ್‌ ಇಂಜಿನ್‌' ಎಂಬ ಸಿನಿಮಾದಲ್ಲಿ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಇಲ್ಲಿ ಚಿಕ್ಕಣ್ಣ ಅವರ ಕಾಂಬಿನೇಶನ್‌ನಲ್ಲಿ ಅವರ ದೃಶ್ಯಗಳು ಸಾಗಿ ಬರಲಿದೆ. ಹೆಸರಿಗೆ ತಕ್ಕಂತೆ ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಇದಾಗಿರುವುದರಿಂದ ಸಾಕಷ್ಟು ಫ‌ನ್ನಿ ಸನ್ನಿವೇಶಗಳು ಚಿಕ್ಕಣ್ಣ ಹಾಗೂ ಸುಮನ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿವೆ. ಈ ಹಿಂದೆ "ಬಾಂಬೆ ಮಿಠಾಯಿ' ಎಂಬ ಸಿನಿಮಾ ಮಾಡಿದ್ದ ಚಂದ್ರಮೋಹನ್‌ ಈ ಚಿತ್ರದ ನಿರ್ದೇಶಕರು.

ಇದೊಂದು ಮೂವರು ಮುಗ್ಧ ಹುಡುಗರ ಸುತ್ತ ನಡೆಯುವ ಕಥೆ. ಹಳ್ಳಿಯಲ್ಲಿರುವ ಮೂವರು ಮುಗ್ಧ ಯುವಕರಿಗೆ ಅದೊಂದು ದಿನ, ತಾವು ದಿಢೀರ್‌ ಶ್ರೀಮಂತರಾಗಿಬಿಡಬೇಕು ಎಂಬ ಆಸೆ ಚಿಗುರುತ್ತದೆ. ಶ್ರೀಮಂತರಾಗೋದು ಸುಲಭವಲ್ಲ. ಆದರೆ, ಕೆಟ್ಟದಾರಿ ಹಿಡಿದರೆ, ಬೇಗನೇ ಶ್ರೀಮಂತರಾಗಿಬಿಡಬಹುದು ಎಂಬ ಆಸೆಯಿಂದ ಕೆಟ್ಟದಾರಿ ಹಿಡಿಯುತ್ತಾರೆ. ಆಮೇಲೆ ಏನೆಲ್ಲಾ ಆಗಿಹೋಗುತ್ತೆ ಎಂಬುದು ಚಿತ್ರದ ಕಥಾ ಸಾರಾಂಶ.

ಕಥೆ ಗಂಭೀರವಾಗಿದ್ದರೂ, ಹಾಸ್ಯದ ಮೂಲಕವೇ ಚಿತ್ರ ಸಾಗುವುದರಿಂದ ನೋಡುಗರಿಗೆ ಎಲ್ಲೂ ಬೋರ್‌ ಎನಿಸುವುದಿಲ್ಲ ಎಂಬುದು ಚಿತ್ರತಂಡದ ಮಾತು. ಮುಖ್ಯವಾಗಿ ಇಲ್ಲಿ ಯುವಕರಿಗೊಂದು ಸಂದೇಶವಿದೆ. ಅದಕ್ಕೆ ಪೂರಕವಾಗಿಯೇ ಶೀರ್ಷಿಕೆ ಇಡಲಾಗಿದೆಯಂತೆ. ಅದೇನೇ ಆದರೂ ಸುಮನ್‌ ರಂಗನಾಥ್‌ ಮತ್ತೂಮ್ಮೆ "ಡಬಲ್‌ ಇಂಜಿನ್‌'ನಲ್ಲಿ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿರುವುದಂತೂ ಸತ್ಯ. 

Trending videos

Back to Top