CONNECT WITH US  

ಶೆಟ್ಟರ "ಅವನೇ ಶ್ರೀಮನ್ನಾರಾಯಣ'ನಿಗೆ ಸಿನಿಪ್ರಿಯರು ಫಿದಾ

ರಕ್ಷಿತ್‌ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ "ಅವನೇ ಶ್ರೀಮನ್ನಾರಾಯಣ' ಚಿತ್ರದ ಫಸ್ಟ್ ಲುಕ್ ಟೀಸರ್ ರಕ್ಷಿತ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಸಖತ್ ಕ್ರೇಜ್ ಹುಟ್ಟಿಸಿದ್ದು ಒಂದು ಕಡೆಯಾದರೆ, ಬಿಡುಗಡೆಯಾದಾಗಿನಿಂದ ಚಿತ್ರದ ಟೀಸರ್ ನ್ನು 13 ಲಕ್ಷಕ್ಕೂ ಹೆಚ್ಚು ಜನ ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಟೀಸರ್ ಟ್ರೆಂಡಿಂಗ್‍ನಲ್ಲಿದೆ.

ಟೀಸರ್‌ನಲ್ಲಿ ಪೊಲೀಸ್‌ ಗೆಟಪ್‌ನಲ್ಲಿರುವ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸನ್‌ಗ್ಲಾಸ್‌ ಹಾಕಿಕೊಂಡು ಗಡ್ಡಬಿಟ್ಟಿರುವ ರಕ್ಷಿತ್‌, ಕೈ ಕೋಳ ಹಾಕಿಕೊಂಡು ಪೊಲೀಸ್‌ ಗೆಪಟ್‌ನಲ್ಲಿ ಮಿಂಚಿದ್ದಾರೆ. ಪೊಲೀಸ್‌ ಆಗಿ ಸ್ವತಃ ಕೈ ಕೋಳ ಹಾಕಿಕೊಂಡಿದ್ದು ಯಾಕೆ ಎಂಬ ಕೌತುಕ ಸಿನಿಪ್ರಿಯರಿಗೆ ಸಹಜವಾಗಿ ಎದ್ದಿದೆ. ಅಲ್ಲದೇ ಅವರ ಮ್ಯಾನರಿಸಂ, ಕಾಸ್ಟ್ಯೂಮ್, ಮತ್ತು ಹಿನ್ನೆಲೆ ಸಂಗೀತ ಪ್ರಮುಖವಾಗಿ ಗಮನಸೆಳೆಯುವ ಅಂಶಗಳು. 

ಇನ್ನು ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಈ ಚಿತ್ರಕ್ಕಾಗಿ ರಕ್ಷಿತ್‌ ಶೆಟ್ಟಿ 8 ಪ್ಯಾಕ್‌ ವರ್ಕೌಟ್‌ ಮಾಡಿರುವುದಲ್ಲದೇ, ಐದು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರದ್ದು ಭ್ರಷ್ಟ ಪೊಲೀಸ್‌ ಅಧಿಕಾರಿಯ ಪಾತ್ರ. 80ರ ದಶಕದ ಉತ್ತರ ಕರ್ನಾಟಕದ ಊರೊಂದರಲ್ಲಿ ನಡೆಯುವ ಕಾಲ್ಪನಿಕ ಘಟನೆಯನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ.

ಈ ಚಿತ್ರದಲ್ಲಿ ರಕ್ಷಿತ್‌ಗೆ ನಾಯಕಿಯಾಗಿ ಸಾನ್ವಿ ಶ್ರೀವಾತ್ಸವ್‌ ನಟಿಸುತ್ತಿದ್ದು, ಅಚ್ಯುತ್‌ ಕುಮಾರ್‌ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಮಧುಸೂಧನ್ ರಾವ್ ಸೇರಿದಂತೆ ಮುಂತಾದವರಿದ್ದಾರೆ. ಇನ್ನು ಚಿತ್ರವನ್ನು ಪುಷ್ಕರ್, ಪ್ರಕಾಶ್‌ (ರಂಗಿ ತರಂಗ) ಮತ್ತು ರಕ್ಷಿತ್‌ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಸಚಿನ್‌ ನಿರ್ದೇಶಿಸುತ್ತಿದ್ದಾರೆ.

Trending videos

Back to Top