“ರಗಡ್’ ಎಂಟ್ರಿ ಕೊಟ್ಟ ಮರಿ ಟೈಗರ್: Watch
Team Udayavani, Jun 22, 2018, 4:47 PM IST
ಅಮ್ಮ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ “ರಗಡ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯಂಗ್ ಅಂಡ್ ಎನರ್ಜಿಟಿಕ್ ಆಗಿ ಪಕ್ಕಾ ಮಾಸ್ ಎಂಟ್ರಿ ಕೊಟ್ಟಿದ್ದಾರೆ ಮರಿ ಟೈಗರ್. ಅಲ್ಲದೇ ಭುಜದ ಮೇಲೆ ಆನೆ ಟ್ಯಾಟೂ ಹಾಕಿಸಿಕೊಂಡು, ಒಂದೇ ಉಸಿರಿನಲ್ಲಿ ಉದ್ದುದ್ದ ಡೈಲಾಗ್ ಹೊಡೆದಿದ್ದಾರೆ.
ಇದೊಂದು ಪಕ್ಕಾ ಲವ್ ಮತ್ತು ಆ್ಯಕ್ಷನ್ ಚಿತ್ರವಾಗಿದ್ದು, ಪಾತ್ರಕ್ಕಾಗಿ 8 ಪ್ಯಾಕ್ ವರ್ಕೌಟ್ ಮಾಡಿದ್ದಾರೆ ವಿನೋದ್ ಪ್ರಭಾಕರ್. ಇದಕ್ಕಾಗಿಯೇ 6 ತಿಂಗಳು ಉಪ್ಪು, ಖಾರ ಬಿಟ್ಟು ವರ್ಕೌಟ್ ಮಾಡಿದ್ದಲ್ಲದೇ, ಚಿತ್ರದಲ್ಲಿ ಆರಂಭದ ದೃಶ್ಯವೇ ಅಂಡರ್ ವಾಟರ್ನಲ್ಲಿ ಇರುವಂಥದ್ದು.
ನೀರಲ್ಲಿ ಸುಮಾರು 30 ಸೆಕೆಂಡ್ಗಳ ಕಾಲ ಇರುವ ದೃಶ್ಯ ಬರುವ ಹಿನ್ನೆಲೆಯಲ್ಲಿ ವಿನೋದ್ ಪ್ರಭಾಕರ್, ತಾನೇ ಅಂಡರ್ವಾಟರ್ ನಲ್ಲಿ ಕುಳಿತುಕೊಳ್ಳುವುದಾಗಿ ನಿರ್ಧರಿಸಿ ಅಂಡರ್ ವಾಟರ್ನಲ್ಲೂ ಉಸಿರು ಗಟ್ಟಿ ಕೂರೋ ರಿಸ್ಕ್ ಸ್ಟಂಟ್ ಟ್ರೈ ಮಾಡಿದ್ದಾರೆ.
ಇನ್ನು ವಿನೋದ್ ಪ್ರಭಾಕರ್ ಎದುರಿಗೆ ನಾಯಕಿಯಾಗಿ ಚೈತ್ರಾ ರೆಡ್ಡಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ದರ್ಶನ್ ಅವರ ಹಲವು ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ಮಹೇಶ್ ಗೌಡ ಆ್ಯಕ್ಷನ್ ಕಟ್ ಹೇಳಿದ್ದು, ಅರುಣ್ ಕುಮಾರ್ ನಿರ್ಮಾಣ, ಅಭಿಮನ್ ರಾಯ್ ಸಂಗೀತ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು