ಚಿರಂಜೀವಿ ಚಿತ್ರದಲ್ಲಿ ಸುದೀಪ್‌


Team Udayavani, Jul 10, 2018, 10:54 AM IST

sudeep-1.jpg

ಮೆಗಾಸ್ಟಾರ್‌ ಚಿರಂಜೀವಿ ಅವರ 151ನೇ ಸಿನಿಮಾವಾದ “ಸೈರಾ – ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಸುದೀಪ್‌ ನಟಿಸುತ್ತಾರಂತೆ ಎಂಬ ಸುದ್ದಿ ಆರಂಭದಲ್ಲಿ ಜೋರಾಗಿ ಕೇಳಿಬಂತು. ಕೆಲ ದಿನಗಳ ನಂತರ ಅವರು ನಟಿಸುತ್ತಿಲ್ಲ, ಇನ್ನೂ ಪಕ್ಕಾ ಆಗಿಲ್ಲವಂತೆ … ಹೀಗೆ ಅಂತೆ-ಕಂತೆಗಳು ಓಡಾಡಿದ್ದೇ ಓಡಾಡಿದ್ದು. ಆದರೆ, ಸುದೀಪ್‌ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಅವರ ಪಾಡಿಗೆ ಸಿನಿಮಾಗಳಲ್ಲಿ ಬಿಝಿಯಾಗಿದ್ದರು.

ಅತ್ತ ಕಡೆ ಚಿರಂಜೀವಿಯವರ “ಸೈರಾ’ ಚಿತ್ರದ ಚಿತ್ರೀಕರಣ ಜೋರಾಗಿ ಸಾಗುತ್ತಿದೆ. ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. “ನಮ್‌ ಬಾಸು ಆ್ಯಕ್ಟ್ ಮಾಡ್ತಾರೋ, ಇಲ್ವೋ’ ಎಂದು ಲೆಕ್ಕಾಚಾರ ಹಾಕುತ್ತಿದ್ದರು. ಹೀಗಿರುವಾಗಲೇ ಸುದೀಪ್‌ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಾನು “ಸೈರಾ’ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳುವ ಮೂಲಕ ಅಭಿಮಾನಿಗಳನ್ನು ಸಂತೋಷಪಡಿಸಿದ್ದಾರೆ. 

ಇಷ್ಟು ದಿನ ಸುದೀಪ್‌ ನಟಿಸುತ್ತಾರೋ, ಇಲ್ಲವೋ ಎಂಬ ಗೊಂದಲಗಳಿಗೆ ಈ ಮೂಲಕ ತೆರೆಬಿದ್ದಿದೆ. “ಸೈರಾ ಚಿತ್ರದಲ್ಲಿ ನಾನು ಲೆಜೆಂಡ್‌ ಮೆಗಾಸ್ಟಾರ್‌ ಚಿರಂಜೀವಿಯವರ ಜೊತೆ ತೆರೆಹಂಚಿಕೊಳ್ಳುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ ಸುದೀಪ್‌. ಈ ಮೂಲಕ ತೆಲುಗಿನ ಬಹುನಿರೀಕ್ಷಿತ ಹಾಗೂ ದೊಡ್ಡ ಬಜೆಟ್‌ನ ಸಿನಿಮಾವೊಂದರ ಭಾಗವಾಗಿದ್ದಾರೆ ಸುದೀಪ್‌. ಅಂದಹಾಗೆ, ಇದು ಸುದೀಪ್‌ ಅವರ ಚೊಚ್ಚಲ ಐತಿಹಾಸಿಕ ಸಿನಿಮಾ.

ಈ ಎಲ್ಲಾ ಕಾರಣಗಳಿಂದಾಗಿ ಸುದೀಪ್‌ ಎಕ್ಸೆ„ಟ್‌ ಆಗಿರುವುದು ಸುಳ್ಳಲ್ಲ. ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪಾತ್ರವೊಂದಕ್ಕೆ ಸುದೀಪ್‌ ಇದ್ದರೇನೇ ಚೆಂದ ಎಂಬುದು ನಿರ್ದೇಶಕರ ಕನಸಾಗಿತ್ತಂತೆ. ಆದರೆ, ಆರಂಭದಲ್ಲಿ ಡೇಟ್ಸ್‌ ಸಮಸ್ಯೆಯಿಂದ ಸುದೀಪ್‌ ಆ ಚಿತ್ರದಲ್ಲಿ ನಟಿಸುವ ಬಗ್ಗೆ ಗೊಂದಲವಿತ್ತು. ಈಗ ಸುದೀಪ್‌, “ಪೈಲ್ವಾನ್‌’, “ಕೋಟಿಗೊಬ್ಬ-3′ ಚಿತ್ರಗಳ ಒಂದೊಂದು ಶೆಡ್ನೂಲ್‌ ಮುಗಿಸಿಕೊಟ್ಟಿದ್ದಾರೆ.

ಹೀಗಾಗಿ ಡೇಟ್ಸ್‌ ಸಮಸ್ಯೆ ಕೂಡಾ ಬಗೆಹರಿದು, ಸುದೀಪ್‌ “ಸೈರಾ’ ತಂಡ ಸೇರಿಕೊಂಡಿದ್ದಾರೆ. ಅವರ ಪಾತ್ರ ಪ್ರಮುಖವಾಗಿದ್ದು, ಕನ್ನಡ ಹಾಗೂ ತೆಲುಗು ಮಾತನಾಡುವ ಪಾತ್ರವಾಗಿರಲಿದೆ ಎಂಬ ಮಾಹಿತಿ ಇದೆ. ಈಗಾಗಲೇ ಸುದೀಪ್‌ “ಈಗ’ ಸೇರಿದಂತೆ ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿ, ತೆಲುಗಿನಲ್ಲಿ ತಮ್ಮದೇ ಆದ ಅಭಿಮಾನಿ ವರ್ಗ ಹುಟ್ಟುಹಾಕಿದ್ದಾರೆ.

ಅಂದಹಾಗೆ, ಸ್ವತಂತ್ರ ಹೋರಾಟಗಾರ ಉಯ್ಯಲವಾಡು ನರಸಿಂಹ ರೆಡ್ಡಿಯವರ ಜೀವನಚರಿತ್ರೆಯನ್ನು ಆಧರಿಸಿ ಈ ಸಿನಿಮಾ ಮಾಡುತ್ತಿದ್ದು, ಚಿತ್ರವನ್ನು ರಾಮ್‌ಚರಣ್‌ ತೇಜಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸುದೀಪ್‌ “ಕೋಟಿಗೊಬ್ಬ-3’ಯಲ್ಲಿ ಬಿಝಿ ಇದ್ದು, ವಿದೇಶದಲ್ಲಿನ ಶೂಟಿಂಗ್‌ ಮುಗಿಸಿದ್ದಾರೆ. ಎಡಿಟಿಂಗ್‌ ವರ್ಶನ್‌ ನೋಡಿದ್ದು, ಚೆನ್ನಾಗಿ ಮೂಡಿಬರುತ್ತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.