CONNECT WITH US  
echo "sudina logo";

ಉಪ್ಪಿ-ರಚಿತಾ ಹೀಗೆ ಕಾಣ್ತಾರೆ ...

ಸೆವೆನ್‌ ಸ್ಟಾರ್‌ ಹೋಟೆಲ್‌ನಲ್ಲಿ ಐ ಲವ್‌ ಯೂ

ನಿರ್ದೇಶಕ ಆರ್‌.ಚಂದ್ರು ಯಾಕೋ ಜಿದ್ದಿಗೆ ಬಿದ್ದವರಂತೆ ತಮ್ಮ ಹೊಸ ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ಸಪೋಟ ಗಾರ್ಡನ್‌ನಲ್ಲಿ ಆರಂಭವಾದ ಉಪೇಂದ್ರ ಅವರ "ಐ ಲವ್‌ ಯೂ' ಚಿತ್ರ ಆ ನಂತರ ನೈಸ್‌ ರೋಡ್‌ ಸುತ್ತಿ, ಉಪೇಂದ್ರ ಅವರ ಹೊಸ ಮನೆ, ರುಪ್ಪೀಸ್‌ ರೆಸಾರ್ಟ್‌ನಲ್ಲಿ ಚಿತ್ರೀಕರಣವಾಗಿ ಈಗ ನೇರವಾಗಿ 7ಸ್ಟಾರ್‌ ಹೋಟೆಲ್‌ ಹೊಕ್ಕಿದೆ! 

ಹೌದು, ಚಂದ್ರು ಅವರ "ಐ ಲವ್‌ ಯೂ' ಚಿತ್ರೀಕರಣ 7 ಸ್ಟಾರ್‌ ಹೋಟೆಲ್‌ ಶೆರಾಟನ್‌ ಹೋಟೆಲ್‌ನಲ್ಲಿ ನಡೆಯುತ್ತಿದೆ. ರಾತ್ರಿ-ಹಗಲೆನ್ನದೇ ಚಿತ್ರೀಕರಣದಲ್ಲಿ ಚಂದ್ರು ಬಿಝಿಯಾಗಿದ್ದಾರೆ. ಇಷ್ಟು ದಿನ ಉಪೇಂದ್ರ ಅವರ ಇಂಟ್ರೋಡಕ್ಷನ್‌ ಫೈಟ್‌ ಸೇರಿದಂತೆ ಇತರ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಚಂದ್ರು ಈಗ ಉಪೇಂದ್ರ ಹಾಗೂ ರಚಿತಾ ರಾಮ್‌ ಕಾಂಬಿನೇಶನ್‌ನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ರಚಿತಾ ರಾಮ್‌ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇಬ್ಬರ ಕಾಂಬಿನೇಶನ್‌ನ ದೃಶ್ಯ, ಹಾಡನ್ನು ಚಂದ್ರು, ಶೆರಾಟನ್‌ ಹೋಟೆಲ್‌ನ ಐಷಾರಾಮಿ ಸೂಟ್‌ ಬುಕ್‌ ಮಾಡಿ, ಅಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಇನ್ನು, ಚಂದ್ರು ಅವರು ಈ ಚಿತ್ರದ ಮೂಲಕ ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಲಿದ್ದಾರಂತೆ. ಇದು "ಎ', "ಉಪೇಂದ್ರ' ಹಾಗೂ "ಪ್ರೀತ್ಸೆ' ಶೈಲಿಯ ಲವ್‌ಸ್ಟೋರಿಯಾಗಿದ್ದು, ಉಪೇಂದ್ರ ಅವರ ಪಾತ್ರ ಕೂಡಾ ವಿಭಿನ್ನವಾಗಿದೆಯಂತೆ.

ಉಪೇಂದ್ರ ಈ ಹಿಂದೆ ತಮ್ಮ "ಎ' ಸಿನಿಮಾದಲ್ಲಿ, "ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದ್ನೇಕಾಯಿ' ಎಂದಿದ್ದರು. ಆದರೆ, ಈಗ 15 ವರ್ಷಗಳ ನಂತರ ಉಪೇಂದ್ರ ಅವರು, ಅದೇ ಪ್ರೀತಿ ಬಗ್ಗೆ ಹೊಸ ಅಂಶವನ್ನು ಹೇಳಲಿದ್ದಾರಂತೆ. ಚಿತ್ರಕ್ಕೆ ಸುಜ್ಞಾನ್‌ ಅವರ ಛಾಯಾಗ್ರಹಣ ಮತ್ತು ಕಿರಣ್‌ ಅವರ ಸಂಗೀತವಿದೆ.

Trending videos

Back to Top