CONNECT WITH US  

"ಗೀತ ಗೋವಿಂದಂ' ಚಿತ್ರದ ಬ್ಲ್ಯಾಕ್‌ & ವೈಟ್‌ ಟೀಸರ್‌ ವೈರಲ್‌: Watch

ಪರಶುರಾಮ್‌ ನಿರ್ದೇಶನದ "ಗೀತ ಗೋವಿಂದಂ' ಚಿತ್ರದ ಫ‌ಸ್ಟ್‌ಲುಕ್‌ ಮತ್ತು ಮೊದಲ ಹಾಡು ಇತ್ತೀಚೆಗಷ್ಟೆ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡಿತ್ತು. ಇದೀಗ ಚಿತ್ರತಂಡ ಚಿತ್ರದ ಟೀಸರ್‌ನ್ನು ಬಿಡುಗಡೆ ಮಾಡಿದ್ದು, 30ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಅರ್ಜುನ್‌ ರೆಡ್ಡಿ' ಖ್ಯಾತಿಯ ವಿಜಯ್‌ ದೇವರಕೊಂಡ ಮತ್ತು ಕನ್ನಡದ ಕಿರಿಕ್‌ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ ಈ ಸಿನಿಮಾದ ಟೀಸರ್‌ ಹಳೇ ಕಾಲದ ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಲಾಗಿದ್ದು, ಸಿನಿಪ್ರಿಯರಿಂದ ಬೊಂಬಾಟ್‌ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿದೆ. ಇನ್ನು ಈ ಸಿನಿಮಾವನ್ನು  ಬನ್ನಿ ವಾಸ್‌ ನಿರ್ಮಿಸುತ್ತಿದ್ದು, ಗೋಪಿ ಸುಂದರ್‌ ಸಂಗೀತ ಚಿತ್ರಕ್ಕಿದೆ. 

Trending videos

Back to Top