CONNECT WITH US  

ಶಿವಣ್ಣನ ನಂತರ "ನಾಗರಹಾವು' ನೋಡಿದ ಜಗ್ಗೇಶ್‌

ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಅಭಿನಯದ ಕ್ಲಾಸಿಕ್‌ ಸಿನಿಮಾ "ನಾಗರಹಾವು' ಈಗಾಗಲೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಅಭಿಮಾನಿಗಳು ಥಿಯೇಟರ್‌ನತ್ತ ಮುಖ ಮಾಡುತ್ತಿದ್ದಾರೆ. ಡಿಜಿಟಲ್‌ ಟಚ್‌ನಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡೋದಾಗಿ ಚಿತ್ರೋದ್ಯಮದ ಹಲವರು ಹೇಳಿದ್ದರು.

ಇತ್ತಿಚೆಗಷ್ಟೇ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಚಿತ್ರ ನೋಡಿ ಅದರ ಬಗ್ಗೆ ಅನೇಕ ನೆನಪುಗಳನ್ನು ಹಂಚಿಕೊಂಡಿದ್ದರು. ಅಲ್ಲದೇ ಈಶ್ವರಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿಷ್ಣುವರ್ಧನ್‌ ಸ್ಮಾರಕ ಆಗಬೇಕು. ಆಗುತ್ತೆ. ಈ ಕುರಿತು ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ ಎಂದಿದ್ದರು. ಶಿವಣ್ಣನ ಜೊತೆ ರವಿಚಂದ್ರನ್‌ ಸೋದರ ಬಾಲಾಜಿ ಕೂಡಾ ಸಿನಿಮಾ ವೀಕ್ಷಿಸಿದರು.

ಇದೀಗ ನವರಸ ನಾಯಕ ಜಗ್ಗೇಶ್‌, ಹೊಸ ತಂತ್ರಜ್ಞಾನದಲ್ಲಿ ಮೂಡಿಬಂದಿರುವ ಹೊಸ ನಾಗರಹಾವನ್ನು ನೋಡಿ ಅದ್ಭುತವಾಗಿದೆ ಎಂದಿದ್ದಾರೆ. ಅಲ್ಲದೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಚಿತ್ರದ ಬಗ್ಗೆ "ಬಾಲ್ಯದಲ್ಲಿ ನೋಡಿದ "ನಾಗರಹಾವು" ರಾಮಾಚಾರಿ ಇಂದು ಚಿತ್ರಮಂದಿರದಲ್ಲಿ ನೋಡಿ ಕಣ್ತುಂಬಿಸಿಕೊಂಡೆ..ಸೂಪರ್ ದಾದ love you..' ಎಂದು  ಬರೆದುಕೊಂಡಿದ್ದಾರೆ.

ಅಂದ ಹಾಗೆ "ನಾಗರಹಾವು' ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಹೌಸ್‌ ಫ‌ುಲ್‌ ಪ್ರದರ್ಶನ ಕಾಣುತ್ತಿದ್ದು, ಸಖತ್‌ ಕಲೆಕ್ಷನ್‌ ಮಾಡಿದೆ. ಅಲ್ಲದೇ ಸಿನಿಮಾವನ್ನು ಹೊರರಾಜ್ಯಗಳಲ್ಲೂ ರಿಲೀಸ್‌ ಮಾಡೋಕೆ ವಿತರಕರು ಮುಂದಾಗಿದ್ದಾರೆ. ಕೆಲವೇ ದಿನಗಳಲ್ಲಿ ಅಲಹಾಬಾದ್‌, ಹೈದರಾಬಾದ್ಗಳಲ್ಲೂ "ನಾಗರಹಾವು' ತೆರೆ ಕಾಣಲಿದೆ.

Trending videos

Back to Top