ಮಮ್ಮಿ ರಿಟರ್ನ್ಸ್


Team Udayavani, Aug 2, 2018, 11:50 AM IST

mummy.jpg

ಕನ್ನಡ ಚಿತ್ರರಂಗದಲ್ಲಿ ಅಮ್ಮನ ಪ್ರೀತಿ ಜಾಸ್ತಿಯಾಗಿದೆ. ಇದಕ್ಕೆ ಇತ್ತೀಚೆಗೆ ಒಂದರ ಹಿಂದೊಂದು ಉದಾಹರಣೆಗಳು ಸಿಗುತ್ತಿವೆ. ಈಗಾಗಲೇ ಚಿರಂಜೀವಿ ಸರ್ಜಾ ಅಭಿನಯದ “ಅಮ್ಮಾ ಐ ಲವ್‌ ಯೂ’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಅಮ್ಮನ ಪಾತ್ರವನ್ನು ಪ್ರಧಾನವಾಗಿಟ್ಟುಕೊಂಡು ಇನ್ನಷ್ಟು ಚಿತ್ರಗಳು ತಯಾರಾಗುತ್ತಿವೆ.

ಈ ಸಾಲಿನಲ್ಲಿ ಪ್ರಮುಖವಾಗಿ ಸಿಗುವ ಚಿತ್ರ “ತಾಯಿಗೆ ತಕ್ಕ ಮಗ’. ಇನ್ನು ಹರಿಪ್ರಿಯಾ ಅವರ 25ನೇ ಚಿತ್ರವಾದ “ಡಾಟರ್‌ ಆಫ್ ಪಾರ್ವತಮ್ಮ’ದಲ್ಲೂ ತಾಯಿ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇನ್ನು ವಿನೋದ್‌ ಪ್ರಭಾಕರ್‌ ಅಭಿನಯದ “ಫೈಟರ್‌’ ಚಿತ್ರದಲ್ಲೂ ನಾಯಕನ ಪಾತ್ರಕ್ಕೆ ಮಹತ್ವ ಎಷ್ಟಿದೆಯೋ, ತಾಯಿ ಪಾತ್ರಕ್ಕೂ ಅಷ್ಟೇ ಮಹತ್ವವಿದೆಯಂತೆ.

ಅದರಲ್ಲೂ ಈ ಮೂರು ಚಿತ್ರಗಳ ಪೈಕಿ ಎರಡರಲ್ಲಿ ಸುಮಲತಾ ಅಂಬರೀಶ್‌ ಅವರು ತಾಯಿಯಾಗಿ ನಟಿಸಿರುವುದು ವಿಶೇಷ. ಹಾಗೆ ನೋಡಿದರೆ, ಕನ್ನಡದಲ್ಲಿ ತಾಯಿಯ ಮಮತೆ, ತ್ಯಾಗ, ಪ್ರೀತಿಯನ್ನು ಎತ್ತಿಹಿಡಿಯುವಂತಹ ಹಲವು ಸಿನಿಮಾಗಳು ಬಂದಿವೆ. “ತಾಯಿ ದೇವರು’, “ತಾಯಿ ಕರುಳು’, “ತಾಯಿಯ ಮಡಿಲಲ್ಲಿ’, “ತಾಯಿಯ ಆಸೆ’, “ತಾಯಿಯ ಹೊಣೆ’, “ತಾಯಿ ಕನಸು’, “ತಾಯಿಯ ನುಡಿ’,  “ಅಮ್ಮ’, “ತಾಯಿ’ ಸೇರಿದಂತೆ ಹಲವು ಚಿತ್ರಗಳು ತಾಯಿಯ ಪ್ರೀತಿ ಮತ್ತು ಮಮತೆಯ ಕುರಿತಾಗಿ ಬಿಡುಗಡೆಯಾಗಿವೆ.

ಆದರೆ, ಅದರ ನಂತರ ಒಂದು ದೊಡ್ಡ ಗ್ಯಾಪ್‌ ಆಗಿತ್ತು ಎಂದರೆ ತಪ್ಪಿಲ್ಲ. ಒಂದು ಹಂತದಲ್ಲಿ ತಾಯಿ ಪಾತ್ರ ಎಂದರೆ ಅದು ಶೋಪೀಸ್‌ ಎನ್ನುವಂತಹ ಪರಿಸ್ಥಿತಿ ಇತ್ತು. ಈ ಕುರಿತು ಕೆಲವು ಹಿರಿಯ ಪೋಷಕ ಕಲಾವಿದೆಯರು ಬಹಿರಂಗವಾಗಿಯೇ ಬೇಸರ ತೋಡಿಕೊಂಡಿದ್ದರು. ಅವಕಾಶಗಳು ಸಿಗುತ್ತಿವೆಯಾದರೂ, ಎಷ್ಟೋ ಚಿತ್ರಗಳಲ್ಲಿ ಮಾಡುವುದಕ್ಕೆ ಏನು ಕೆಲವೇ ಇರುವುದಿಲ್ಲ,

ಸುಮ್ಮನೆ ಹೀಗೆ ಬಂದು ಹಾಗೆ ಹೋಗುವುದಕ್ಕೆ ಪಾತ್ರಗಳು ಸೀಮಿತವಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಈಗ ತಾಯಿ ಪಾತ್ರಗಳಿಗೆ ಮಹತ್ವ ಸಿಗುತ್ತಿರುವುದಷ್ಟೇ ಅಲ್ಲ, ತಾಯಿಯ ಇನ್ನೊಂದು ಮಜಲನ್ನು ತೋರಿಸಲಾಗುತ್ತಿದೆ. ಇದುವರೆಗೂ ತಾಯಿ ಎಂದರೆ ಮಮತೆ, ತ್ಯಾಗ, ಪ್ರೀತಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಮುಂದೆ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ತಾಯಿ ಒಬ್ಬ ಹೋರಾಟಗಾರ್ತಿಯೂ ಆಗಿದ್ದಾಳೆ ಎನ್ನುವುದು ವಿಶೇಷ.

ಇಲ್ಲಿ ತಾಯಿ ಬರೀ ಮಮತಾಮಯಿಯಷ್ಟೇ ಅಲ್ಲ ಅಥವಾ ಬರೀ ಕಣ್ಣೀರು ಸುರಿಸುವುದಷ್ಟೇ ಅಲ್ಲ, ಅದರಾಚೆಗೆ ಹೋರಾಟ, ಸಂಘಟನೆ ಮಾಡುವುದರ ಜೊತೆಗೆ ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾಳೆ. ಎಲ್ಲಕ್ಕಿಂತ ಹೆಚ್ಚಾಗಿ, ಕೆಲವು ವರ್ಷಗಳಿಂದ ಚಿತ್ರದ ಶೀರ್ಷಿಕೆಗಳಿಂದ ದೂರವೇ ಉಳಿದಿದ್ದ ಅಮ್ಮ, ಈಗ ಶೀರ್ಷಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಫಾರ್ಮ್ಗೆ ಬಂದಿದ್ದಾಳೆ.

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.