CONNECT WITH US  

ವೈರಲ್ ಆಯ್ತು "ದಿ ವಿಲನ್' ಲವ್ ಸಾಂಗ್: Watch

"ಲವ್​ ಆಗೋಯ್ತೆ ನಿನ್ನ ಮ್ಯಾಲೆ' ಹಾಡಿಗೆ ದನಿಯಾದ್ರು ಪ್ರೇಮ್

ಪ್ರೇಮ್ ನಿರ್ದೇಶನದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ "ದಿ ವಿಲನ್'​ ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಹೌದು! "ಲವ್​ ಆಗೋಯ್ತೆ ನಿನ್ನ ಮ್ಯಾಲೆ' ಎನ್ನುವ ಹಾಡು ಇಂದು ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದ್ದು, ಹಾಡಿಗೆ ದನಿಯಾಗುವುದರ ಜೊತೆಗೆ ಸಾಹಿತ್ಯ ಬರೆದಿದ್ದಾರೆ ನಿರ್ದೇಶಕ ಪ್ರೇಮ್. 

ಹಾಡು ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ 3 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಹಾಡಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈ ಮೊದಲಿನ ಎರಡು ಹಾಡುಗಳು ಮಾಸ್ ಫೀಲ್ ಕೊಟ್ಟರೆ, "ಲವ್​ ಆಗೋಯ್ತೆ ನಿನ್ನ ಮ್ಯಾಲೆ' ಹಾಡು ಪಕ್ಕಾ ಕ್ಲಾಸ್ ಅನುಭವ ನೀಡಲಿದೆ.

ಅಲ್ಲದೇ, ಈ ಹಾಡಿನಲ್ಲಿ ಶಿವಣ್ಣ, ಸುದೀಪ್ ಮತ್ತು ಆ್ಯಮಿ ಜಾಕ್ಸನ್ ಒಟ್ಟಿಗೆ ಹೆಜ್ಜೆ ಹಾಕಿದ್ದು, ಮತ್ತೊಂದು ಕುತೂಹಲ ವಿಚಾರವೆಂದರೆ ಡಾ.ರಾಜ್ ರೀತಿಯೇ ರೆಟ್ರೋ ಲುಕ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಇದೊಂದು ವಿಶೇಷ ಹಾಡಾಗಲಿದೆ. 

ಇನ್ನು ಚಿತ್ರವನ್ನು ಸಿ.ಆರ್‌. ಮನೋಹರ್‌ ತಮ್ಮ ತನ್ವಿ ಫಿಲಂಸ್‌ ಲಾಂಛನದಲ್ಲಿ ನಿರ್ಮಿಸುತ್ತಿದ್ದು, ಗಿರೀಶ್‌ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶಿವರಾಜಕುಮಾರ್‌, ಸುದೀಪ್‌, ಶ್ರುತಿ ಹರಿಹರನ್‌, ಆ್ಯಮಿ ಜಾಕ್ಸನ್‌, ಮಿಥುನ್‌ ಚಕ್ರವರ್ತಿ, ಶ್ರೀಕಾಂತ್‌, ತಿಲಕ್‌ ಮುಂತಾದವರು ನಟಿಸುತ್ತಿದ್ದಾರೆ. 


Trending videos

Back to Top