ಲೈಫ್ ಜೊತೆ 28 ಸಾವಿರ ಸೆಲ್ಫಿ!
Team Udayavani, Aug 8, 2018, 11:12 AM IST
ದಿನಕರ್ ತೂಗುದೀಪ ನಿರ್ದೇಶನದ “ಲೈಫ್ ಜೊತೆ ಒಂದ್ ಸೆಲ್ಫಿ’ ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಒಂದು ಸುದ್ದಿಗೆ ಕಾರಣವಾಗಿದೆ. ಅದು 28 ಸಾವಿರ ಸೆಲ್ಫಿ ಕುರಿತ ವಿಷಯ. ಹೌದು, ಚಿತ್ರದ ಶೀರ್ಷಿಕೆಯೇ “ಸೆಲ್ಫಿ’ ಅಂತ ಇರುವುದರಿಂದಲೋ ಏನೋ, ಚಿತ್ರತಂಡ, ಹೊಸದೊಂದು ಪ್ರಚಾರದ ಹಾದಿ ಹಿಡಿದಿದೆ. ಚಿತ್ರತಂಡದ ಹೊಸ ಪ್ರಚಾರಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು, ಸಾರ್ವಜನಿಕರೂ ಕೈ ಜೋಡಿಸಿದ್ದಾರೆ. ಅಲ್ಲಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದವರ ಸಂಖ್ಯೆ ಬರೋಬ್ಬರಿ 28 ಸಾವಿರ ಮೀರಿದೆ.
“ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರತಂಡ “ಫೇಸ್ಬುಕ್’ನಲ್ಲಿ ಸೆಲ್ಫಿ ತೆಗೆಸಿ, ಕಳುಹಿಸಿ ಎಂಬ ಹೇಳಿಕೆ ನೀಡಿತ್ತು. ಅದಕ್ಕೆ ಸಾವಿರಾರು ಜನರು ಸ್ಪಂದಿಸಿದ್ದಾರೆ. ಅಷ್ಟೇ ಅಲ್ಲ, ಸೆಲೆಬ್ರಿಟಿಗಳು ಸಹ ಸೆಲ್ಫಿ ತೆಗೆದು ಕಳುಹಿಸಿದ್ದಾರೆ. ಶಿವರಾಜ್ಕುಮಾರ್, ದರ್ಶನ್, ಸುದೀಪ್, ಪುನೀತ್, ಜಗ್ಗೇಶ್, ಅಮೂಲ್ಯ, ಅಭಿಷೇಕ್, ಧರ್ಮ, ಸೃಜನ್ಲೋಕೇಶ್ ಸೇರಿದಂತೆ ಚಿತ್ರರಂಗದ ಅನೇಕ ನಟ,ನಟಿಯರು ಸೆಲ್ಫಿ ತೆಗೆದು ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಅದರೊಂದಿಗೆ ಸಾರ್ವಜನಿಕರು ಸಹ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.
ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ಮುಂತಾದವರು ನಟಸಿರುವ “ಲೈಫ್ ಜೊತೆ ಒಂದು ಸೆಲ್ಫಿ’ ಚಿತ್ರವು ಪ್ರೀತಿ ಸ್ನೇಹಗಳ ಸುತ್ತಾ ಹೆಣೆದ ಕಥೆ. ಬದುಕಿನ ಎಲ್ಲಾ ಬಂಧಗಳ ನಡುವೆ ಸ್ನೇಹ ಎಷ್ಟು ಮುಖ್ಯ ಎಂಬುದನ್ನು ಸಾರುವ ಈ ಚಿತ್ರ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ತಯಾರಾಗಿದೆ. ಸಮೃದ್ಧಿ ಮಂಜುನಾಥ್ ನಿರ್ಮಾಪಕರು. ಮಾನಸ ದಿನಕರ್ ಕಥೆ ಬರೆದಿದ್ದಾರೆ. ವಿ. ಹರಿಕೃಷ್ಣ ಸಂಗೀತವಿದೆ. ನಿರಂಜನ್ ಬಾಬು ಛಾಯಾಗ್ರಹಣವಿದೆ. ಚಿಂತನ್ ಎ.ವಿ. ಸಂಭಾಷಣೆ ಬರೆದರೆ, ಈಶ್ವರಿ ಕುಮಾರ್ ಕಲಾನಿರ್ದೇಶನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ