ಆರೋಪಗಳಿಗೆ ನಿಖೀಲ್‌ ಉತ್ತರ | Udayavani - ಉದಯವಾಣಿ
   CONNECT WITH US  
echo "sudina logo";

ಆರೋಪಗಳಿಗೆ ನಿಖೀಲ್‌ ಉತ್ತರ

ನಾನು ರೀಮೇಕ್‌ ಮಾಡಲ್ಲ; "ಸೀತಾರಾಮ ಕಲ್ಯಾಣ' ರೀಮೇಕ್‌ ಅಲ್ಲ

ತಮ್ಮ ಹೊಸ ಚಿತ್ರ "ಸೀತಾರಾಮ ಕಲ್ಯಾಣ' ಚಿತ್ರವು ತೆಲುಗಿನ ಅಲ್ಲು ಅರ್ಜುನ್‌ ಅಭಿನಯದ "ಸರೈನೋಡು' ಚಿತ್ರದ ರೀಮೇಕ್‌ ಎಂಬ ಆರೋಪ ಸುಳ್ಳು ಎಂದಿರುವ ನಿಖೀಲ್‌, ಅದು ಯಾವುದೇ ಚಿತ್ರದ ರೀಮೇಕ್‌ ಅಲ್ಲ ಮತ್ತು ತಾವು ರೀಮೇಕ್‌ ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಮಧ್ಯಾಹ್ನ ಅರಮನೆ ಮೈದಾನದಲ್ಲಿ ನಡೆದ "ಸೀತಾರಾಮ ಕಲ್ಯಾಣ' ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾತನಾಡಿದ ಅವರು, "ಟೀಸರ್‌ ನೋಡಿ ಈ ತರಹದ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಚಿತ್ರದಲ್ಲಿರುವ ಆ್ಯಕ್ಷನ್‌ ದೃಶ್ಯಗಳನ್ನು ಹೈಲೈಟ್‌ ಮಾಡಲಿಕ್ಕೆಂದೇ ಈ ಟೀಸರ್‌ ಮಾಡಲಾಗಿತ್ತು. ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿರುವುದು ತೆಲುಗಿನ ಜನಪ್ರಿಯ ಸಾಹಸ ನಿರ್ದೇಶಕರಾದ ರಾಮ್‌-ಲಕ್ಷ್ಮಣ್‌ ಜೋಡಿ. ತೆಲುಗಿನ ಬಹುತೇಕ ಸ್ಟಾರ್‌ ಚಿತ್ರಗಳಿಗೆ ಅವರೇ ಸಾಹಸ ನಿರ್ದೇಶನವನ್ನು ಅವರು ಮಾಡಿರುವುದರಿಂದ, ಆ ಚಿತ್ರಗಳ ಛಾಪನ್ನು ಇಲ್ಲೂ ಕಾಣಬಹುದು. ಅದು ಬಿಟ್ಟರೆ, ಇದು ರೀಮೇಕ್‌ ಅಲ್ಲ. ಹಲವು ಚಿತ್ರಗಳಿಂದ ಸ್ಫೂರ್ತಿ ಪಡೆದು ಮಾಡಿರುವ ಚಿತ್ರ. ಇದು ಯಾವುದೇ ಚಿತ್ರದ ಕಾಪಿ ಅಲ್ಲ' ಎನ್ನುತ್ತಾರೆ ನಿಖೀಲ್‌.|

ಇನ್ನು ತಾವು ರೀಮೇಕ್‌ ಮಾಡುವುದಿಲ್ಲ ಎನ್ನುವ ಅವರು, "ನಾನು ರೀಮೇಕ್‌ ಮಾಡುವುದಿಲ್ಲ. ರೀಮೇಕ್‌ ಮಾಡುವ ಅವಶ್ಯಕತೆಯೂ ಇಲ್ಲ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಇದು ಹಲವು ಚಿತ್ರಗಳಿಂದ ಸ್ಫೂರ್ತಿಗೊಂಡ ಒಂದು ಚಿತ್ರ. ಈ ಚಿತ್ರವನ್ನು ನೋಡುತ್ತಿದ್ದರೆ, ಎಲ್ಲೋ ನೋಡಿದ್ದೀನಾ ಅಂತನಿಸಬಹುದು. ಅದು ಬಿಟ್ಟರೆ, ಇದು ರೀಮೇಕ್‌ ಅಲ್ಲ' ಎಂದು ಸ್ಪಷ್ಟವಾಗಿ ಹೇಳುತ್ತಾರೆ ನಿಖೀಲ್‌.

Trending videos

Back to Top